ಬೆಂಗಳೂರು: ನಿಯಮ ಉಲ್ಲಂಘಿಸಿ ಪೋಲೀಸ್ ಅಧಿಕಾರಿಗೆ ಕಬ್ಬನ್ ಪಾರ್ಕ್ ಪ್ರವೇಶಾನುಮತಿ, ಸರ್ಕಾರಿ ಅಧಿಕಾರಿ ಅಮಾನತು

ಲಾಕ್ ಡೌನ್  ಮಧ್ಯೆ ಪೊಲೀಸ್ ಅಧಿಕಾರಿ ಮತ್ತು ಇತರರಿಗೆ ಕಬ್ಬನ್ ಪಾರ್ಕ್ ಒಳಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದಕ್ಕಾಗಿ ತೋಟಗಾರಿಕಾ ವಿಭಾಗದ ಹಿರಿಯ  ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್ ಡೌನ್  ಮಧ್ಯೆ ಪೊಲೀಸ್ ಅಧಿಕಾರಿ ಮತ್ತು ಇತರರಿಗೆ ಕಬ್ಬನ್ ಪಾರ್ಕ್ ಒಳಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದಕ್ಕಾಗಿ ತೋಟಗಾರಿಕಾ ವಿಭಾಗದ ಹಿರಿಯ  ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

"ಕರ್ನಾಟಕದ ತೋಟಗಾರಿಕೆ ಇಲಾಖೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಲಾಕ್ ಡೌನ್ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಾರ್ವಜನಿಕರ ಗುಂಪನ್ನು ಕಬ್ಬನ್ ಪಾರ್ಕಿನೊಳಕ್ಕೆ ಪ್ರವೇಶಿಸಲು ನುಮತಿಸಿದ್ದಕ್ಕಾಗಿ ಕಬ್ಬನ್ ಪಾರ್ಕ್ ಉಪನಿರ್ದೇಶಕಿ ಕುಸುಮಾ ಅವರನ್ನು ಅಮಾನತುಗೊಳಿಸಿದೆ" ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ ಮಂಜಪ್ಪ ಹೇಳಿದ್ದಾರೆ.

ಕರ್ನಾಟಕ ಸಾರ್ವಜನಿಕ ಸೇವಾ ನಿಯಮಉಲ್ಲಂಘನೆಗಾಗಿ ಕುಸುಮಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಂಜಪ್ಪ ಹೇಳಿದರು. "ಕುಸುಮಾ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಉದ್ಯಾನವನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ, ಇದರಿಂದಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ" ಎಂದು ಅವರು ಹೇಳಿದರು.

ಆದರೆ, ಉದ್ಯಾನವನಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಇತರರ ಗುರುತುಗಳು ಬಹಿರಂಗಗೊಂಡಿಲ್ಲ. ಚಿನ್ನಸ್ವಾಮಿ ಕ್ರಿಕೆಟ್ಸ್ಟೇಡಿಯಂ ನಿಂದ ರ್ನಾಟಕ ಹೈಕೋರ್ಟ್ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಸೇರಿ ನಗರದ ಹೃದಯಭಾಗದಲ್ಲಿ ಕಬ್ಬನ್ ಪಾರ್ಕ್ ಇದೆ. ಇದು ನಗರದ ಮುಖ್ಯ ಉದ್ಯಾನಗಳಲ್ಲಿ ಒಂದಾಗಿದೆ. ಇಲ್ಲಿನ ಬೃಹತ್ ಬಿದಿರಿನ ಮರಗಳ ತೋಪುಗಳು ಜನರ ಆಕರ್ಷಣೆಗೆ ಕಾರಣವಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com