ಮ್ಯಾಂಗೂ ಪಿಕ್ಕಿಂಗ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್
ಮ್ಯಾಂಗೂ ಪಿಕ್ಕಿಂಗ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್

ಮಂಡ್ಯ: ಆನ್ ಲೈನ್ ಮೂಲಕ ಮಾವು ಖರಿದಿಸುವ ಮ್ಯಾಂಗೂ ಪಿಕ್ಕಿಂಗ್ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಆನ್ ಲೈನ್ ಮೂಲಕ ಮಾವು ಖರಿದಿಸುವ ಮ್ಯಾಂಗೂ ಪಿಕ್ಕಿಂಗ್ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಿದರು.

ಮಂಡ್ಯ: ಆನ್ ಲೈನ್ ಮೂಲಕ ಮಾವು ಖರಿದಿಸುವ ಮ್ಯಾಂಗೂ ಪಿಕ್ಕಿಂಗ್ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಿದರು.

ಮಂಡ್ಯ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ರೈತ ಶ್ರೀನಿವಾಸ್ ಅವರ ಮಾವಿನ ತೋಟದಲ್ಲಿ ಆನ್‌ಲೈನ್ ಮೂಲಕ ಮಾವು ಖರಿದಿಸುವ ಮ್ಯಾಂಗೂ ಪಿಕಿಂಗ್ ಎಂಬ ವಿನೂತನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾವು ರೈತರ ಜೀವನದಲ್ಲಿ ಮಹತ್ತರ ಬದಲಾವಣೆ ತರುತ್ತಿದು ರೈತರು ಮಾವು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದರು. 

ಇಡೀ ವಿಶ್ವದಲ್ಲೆ ಭಾರತ ಅತಿ ಹೆಚ್ಚು ಮಾವು ಬೆಳೆಯುತ್ತಿದ್ದು ಭಾರತದ ಪೈಕಿ ಕರ್ನಾಟಕ ಹೆಚ್ಚು ಮಾವು ಬೆಳೆಯುವ ರಾಜ್ಯವಾಗಿದೆ. ಹಣ್ಣುಗಳ ರಾಜ ಮಾವನ್ನು ಬೆಸಿಗೆ ಕಾಲದ ಪೂರ್ವ ಮುಂಗಾರು ಆರಂಭದ ವೇಳೆ ಬೆಳೆಯುತ್ತಾರೆ. ಮಾವಿಗೂ ಭಾರತಕ್ಕೊ ಅವಿನಾಭಾವ ಸಂಬಂಧವಿದ್ದು  ಲ್ಯಾಟಿನ್ ಭಾಷೆಯಲ್ಲಿ ಮಾವನ್ನು ಮ್ಯಾಂಗೂ ಇಂಡಿಕಾ ಎಂದು ಕರೆಯುತ್ತಾರೆ. ಹೀಗಾಗಿ ಇಲ್ಲಿನ ರೈತರ ಜೀವನದಲ್ಲಿ ಮಾವು ಹಾಸುಹೊಕ್ಕಾಗಿದೆ. ೬೦-೭೦ರ ದಶಕದಲ್ಲಿ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಕೇವಲ ರಾಗಿ, ಹುರಳಿ ಬೆಳೆಯುತ್ತಿದ್ದರು. ಆದರೆ ಇಂದು ಹೆಚ್ಚಿನ ಪ್ರಮಾಣದಲ್ಲಿ  ಮಾವು ಬೆಳೆಯುತ್ತಿದ್ದಾರೆ. ಅಲ್ಲದೆ ಆರ್ಥಿಕವಾಗಿಯೂ ಸಹ ಸದೃಢರಾಗುತ್ತಿದ್ದಾರೆ ಎಂದು ತಿಳಿಸಿದರು. 

ಈ ಯೋಜನೆಯಡಿ ಸಾರ್ವಜನಿಕರು ರೈತರ ತೋಟಕ್ಕೆ ತೆರಳಿ ತಮಗೆ ಇಷ್ಟವಾದ ಮಾವು ಖರಿದಿಸಬಹುದಾಗಿದೆ. ಮಾಲ್ ಹಾಗೂ ಇತರೆಡೆ ಖರೀಧಿಸುವ ಮಾವಿನಲ್ಲಿ ತಾಜಾತನ ಇರುವುದಿಲ್ಲ. ಇಲ್ಲಿ ಖರೀದಿಸುವ ಮಾವಿನಲ್ಲಿ ತಾಜಾತನ ಇರುತ್ತದೆ. ರಾಸಾಯನಿಕ ಮುಕ್ತವಾಗಿ ಆರೋಗ್ಯಕ್ಕೆ  ಬೇಕಾದ ವಿಟಮಿನ್‌ಗಳಿರುತ್ತವೆ. ಆಲ್ಲದೆ ಈ ಮಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆನ್‌ಲೈನ್ ವೈವಸ್ಥೆಯಿಂದ ಖರಿದಿದಾರರಿಗೂ ಅನೂಕೂಲ ರೈತರ ಪರಿಶ್ರಮಕ್ಕೂ ಬೆಲೆ ಸಿಗುತ್ತದೆ. ಇದೊಂದು ಹೊಸ ಅಧ್ಯಾಯ. ಈ ಕ್ರಿಯೆ ನಿರಂತರವಾಗಿ ನಡೆಯಬೇಕು. ಬೆಳೆಗಾರರು  ಮಾವಿನ ಜೊತೆ ಇನ್ನಿತರೆ ಮಿಶ್ರ ತಳಿಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ಜಿ.ಪಂ.ಸಿಇಓ ಯಾಲಕ್ಕಿಗೌಡ ಮಾತನಾಡಿ ರೈತ ಶ್ರೀನಿವಾಸ್ ಅವರು ೩೦ ಎಕ್ಕರೆ ತೋಟದಲ್ಲಿ ಹಲವಾರು ತಳಿಯ ಮಾವನ್ನು ವೈಜ್ಙಾನಿಕವಾಗಿ ಬೆಳೆದಿದ್ದಾರೆ. ಈ ಯೋಜನೆಯಿಂದ ರೈತರಿಗೂ ಅನೂಕೂಲ, ಕೊಂಡುಕೊಳ್ಳುವವರಿಗೂ ಅನೂಕೂಲ ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಉಪ ನಿರ್ಥೇಶಕ ರಾಜು,ಉಪ ಅರಣ್ಯಾಧಿಕಾರಿ ಸದಾಶಿವಮೂರ್ತಿ,ತಹಶೀಲ್ದಾರ್ ಚಂದ್ರಮೌಳಿ,ವಾರ್ತಾಧಿಕಾರಿ ಹರೀಶ್, ತಫಟದ ಮಾಲೀಕ ಶ್ರೀನಿವಾಸ್,ಅಚ್ಚಿವರ‍್ಸ ಶಾಲೆಯ ಮುಖ್ಯಸ್ಥ ಮೂಹನ್ ಉಪಸ್ಥಿತರಿದರು.

-ನಾಗಯ್ಯ

Related Stories

No stories found.

Advertisement

X
Kannada Prabha
www.kannadaprabha.com