ಎಂಎಸ್‌ಎಂಇಗೆ ಸಹಾಯ ಮಾಡಲು ಎಲ್ಲಾ ರೀತಿಯ ಶ್ರಮ ಪಡಲಾಗುತ್ತಿದೆ: ಸಂದರ್ಶನದಲ್ಲಿ ಜಗದೀಶ್ ಶೆಟ್ಟರ್

ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬದುಕುಳಿಯಲು ಹೆಣಗಾಡುತ್ತಿದ್ದು, ಈ ನಡುವಲ್ಲೇ ಸರ್ಕಾರ ಎಂಎಸ್‌ಎಂಇಗೆ ಸಹಾಯ ಮಾಡಲು ಎಲ್ಲಾ ರೀತಿಯ ಪರಿಶ್ರಮಗಳನ್ನು ಪಡುತ್ತಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. 
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬದುಕುಳಿಯಲು ಹೆಣಗಾಡುತ್ತಿದ್ದು, ಈ ನಡುವಲ್ಲೇ ಸರ್ಕಾರ ಎಂಎಸ್‌ಎಂಇಗೆ ಸಹಾಯ ಮಾಡಲು ಎಲ್ಲಾ ರೀತಿಯ ಪರಿಶ್ರಮಗಳನ್ನು ಪಡುತ್ತಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಲಾಕ್'ಡೌನ್ ನಿಂದಾಗಿ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಸರ್ಕಾರ ಎಂಎಸ್‌ಎಂಇಗೆ ಸಾಕಷ್ಟು ಸಹಾಯಗಳನ್ನು ಮಾಡುತ್ತಿದೆ. ಪ್ರಧಾನಮಂತ್ರಿಗಳು ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್ ಈ ಉದ್ಯಮಗಳು ಕೊಂಚ ಉಸಿರಾಡುವಂತೆ ಮಾಡಿದೆ. ರಾಜ್ಯದಲ್ಲಿ ಪುನರಾರಂಭಗೊಂಡಿರುವ ಕೈಗಾರಿಕೆಗಳ ಸಂಖ್ಯೆ ಕೇವಲ ಶೇ.25-30ರಷ್ಟಿದೆ ಎಂದು ಹೇಳಿದ್ದಾರೆ. 

ಎಂಎಸ್‌ಎಂಇಗೆ ಸರ್ಕಾರ ಯಾವೆಲ್ಲಾ ಸಹಾಯ ಮಾಡಿದೆ? 
ಪ್ರಸ್ತುತ ರಾಜ್ಯದಲ್ಲಿ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು 6.5 ಲಕ್ಷದಷ್ಟಿವೆ. ಈ ಎಲ್ಲವೂ ನೋಂದಾಯಿತ ಕೈಗಾರಿಕೆ ಇಲಾಖೆಗಳಾಗಿವೆ. 2 ಲಕ್ಷ ಕೈಗಾರಿಕೆಗಳು ನೋಂದಾವಣಿ ಮಾಡಿಕೊಳ್ಳದ ಕೈಗಾರಿಕೆಗಳೂ ಇವೆ. ಒಬ್ಬರು ಅಥವಾ ಇಬ್ಬರು ಕಾರ್ಮಿಕರನ್ನು ಹೊಂದಿರುವುದನ್ನು ಸಣ್ಣ ಕೈಗಾರಿಕೆ ಎಂದು ಕರೆಯಲಾಗುತ್ತದೆ. ಪ್ರಧಾನಮಂತ್ರಿಗಳೂ ರೂ.20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ರೂ.3 ಲಕ್ಷ ಕೋಟಿ ವಿಶೇಷವಾಗಿ ಕೈಗಾರಿಕೆಗಳಿಗಾಗಿಯೇ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ನೀಡಿರುವ ಸಹಾಯವನ್ನು ಪ್ರತೀಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುತ್ತೇವೆ. 

ಸಾಕಷ್ಟು ಕೈಗಾರಿಕೋದ್ಯಮಗಳು ಮುಚ್ಚುತ್ತಿವೆ. ಕೆಲ ಕೈಗಾರಿಕೆ ಸಂಸ್ಥೆಗಳಂತೂ ಕಾರ್ಮಿಕರಿಗೆ ವೇತನ ನೀಡುವುದು, ಬಾಡಿಗೆ, ತೆರಿಗೆ, ಬ್ಯಾಂಕ್ ಸಾಲ ಕಟ್ಟುವುದರ ಕುರಿತು ಸಾಕಷ್ಟು ನೋವು ಅನುಭವಿಸುತ್ತಿವೆ. ಇಂತಹವ ಸಂಕಷ್ಟ ದೂರಾಗಿಸಲು ಸರ್ಕಾರ ಏನು ಮಾಡುತ್ತಿದೆ? 
ವೇತನ ನೀಡುವುದರಲ್ಲಿ ಸಂಸ್ಥೆಗಳು ಸಂಕಷ್ಟ ಪಡುತ್ತಿರುವುದು ನಿಜ. ಬ್ಯಾಂಕ್ ಗಳಿಂದ ಸಾಲ ತೆಗೆದುಕೊಂಡು ಅವರು ಆ ಕಷ್ಟಗಳನ್ನು ದೂರಾಗಿಸಿಕೊಳ್ಳಬಹುದು. ಇನ್ನು ಬಾಡಿಗೆ ಕಟ್ಟುವುದು ದೊಡ್ಡ ವಿಚಾರವಲ್ಲ. ಸಾಕಷ್ಟು ಕೈಗಾರಿಕೆ ಇಲಾಖೆಗಳು ತಮ್ಮ ಸ್ವಂತ ಭೂಮಿಗಳಲ್ಲಿಯೇ ನಡೆಯುತ್ತಿವೆ. ಇನ್ನು ಪಿಎಫ್ಗೆ ಸರ್ಕಾರವೇ ಶೇ.50ರಷ್ಟು ಹಣವನ್ನು ನೀಡುತ್ತಿದೆ. ಒಬ್ಬ ನೌಕರ ರೂ.15,000ಕ್ಕಿಂತಲೂ ಕಡಿಮೆ ವೇತನ ಪಡೆಯುತ್ತಿದ್ದರೆ, ಎಲ್ಲಾ ಹಣವನ್ನು ಸರ್ಕಾರವೇ ನೀಡುತ್ತದೆ. ಇನ್ನು ವಿದ್ಯುತ್ ವಿಚಾರಕ್ಕೆ ಬಂದರೆ, ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಎರಡು ತಿಂಗಳ ವಿದ್ಯುತ್ ಬಿಲ್ ಗಳ ಮೊತ್ತವನ್ನು ಸರ್ಕಾರವೇ ಮನ್ನಾ ಮಾಡಲಿದೆ. ದೊಡ್ಡ ಉದ್ಯಮಗಳಿಗೂ ಸರ್ಕಾರ ಪರಿಹಾರಗಳನ್ನು ನೀಡಿದೆ. 

ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕೈಗಾರಿಕೆ ಇಲಾಖೆಗಳು ಕರ್ನಾಟಕಕ್ಕೆ ಸ್ಥಳಾಂತರೊಳ್ಳಲು ಯತ್ನಿಸುತ್ತಿವೆಯೇ? 
ಅಂತರ ಕೈಗಾರಿಕೆಗಳಿಗೆ ಭೂಮಿ ನೀಡಲು ನಾವು ಸಿದ್ಧರಿದ್ದೇವೆ. ಈ ಕುರಿತು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ವಿಶ್ವದ ಅನೇಕ ಕೈಗಾರಿಕೆ ಕಂಪನಿಗಳು ಭಾರತಕ್ಕೆ ಸ್ಥಳಾಂತರಗೊಳ್ಳಲು ಮುಂದಾಗುತ್ತಿವೆ ಎಂಬ ಮಾಹಿತಿಗಳು ಬಂದಿವೆ. ಮುಖ್ಯ ಕಾರ್ಯದರ್ಶಿಗಳು ದೇಶದ ವಕ್ತಾರರನ್ನು ಹೊಂದಿರುವ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಇವರು ನೀಡಿರುವ ಮಾಹಿತಿ ಪ್ರಕಾರ ಸಾಕಷ್ಟು ಉದ್ಯಮಿಗಳು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ನಾವು ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಅಭಿವೃದ್ಧಿಗಾಗಿ ಇಲ್ಲಿನ ಭೂಮಿ ನೀಡಲು ನಿರ್ಧರಿಸಿದ್ದೇವೆ. 

ನವೆಂಬರ್ ತಿಂಗಳಿನಲ್ಲಿ ಜಾಗತಿಕ ಹೂಡಿಕೆ ಸಭೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ, ನೀವು ಸಾಮಾನ್ಯವಾಗಿ ಇಂತಹ ಸಭೆಗಳಿಗೆ 6 ತಿಂಗಳ ಮುನ್ನವೇ ಸಿದ್ಧತೆ ನಡೆಸೂತ್ತೀರಿ. ಈ ಬಾರಿ ಈ ಸಭೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? 
ನವೆಂಬರ್ 3, 4, 5 ರಂದು ಸಭೆ ನಡೆಸಲು ನಿರ್ಧರಿಸಿದ್ದೇವೆ. ಮೊದಲ ಸಭೆ ರೂ.2.5 ಲಕ್ಷ ಕೋಟಿಯಷ್ಟು ಆದಾಯವನ್ನು ತಂದುಕೊಟ್ಟಿತ್ತು. ಹೀಗಾಗಿ ಈ ಬಾರಿಯೂ ಹೆಚ್ಚಿನ ಕಾರ್ಯಗಳು ನಡೆಯುತ್ತವೆ. ಕೊರೋನಾ ವೈರಸ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಂಚ ಮಟ್ಟದಲ್ಲಿ ವಿರಾಮವನ್ನು ತೆಗೆದುಕೊಂಡಿದ್ದೇವೆ. ಹೂಡಿಕೆದಾರರನ್ನು ಆಕರ್ಷಿಸಲು ಎಲ್ಲಾ ರೀತಿಯ ತಂತ್ರಗಳನ್ನು ರಚಿಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಈ ಸಭೆಯನ್ನು ಆಯೋಜಿಸುವುದು ಕಷ್ಟ. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. 

ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಪಕ್ಷಗಳು ಹೇಳುತ್ತಿವೆ. ಇನ್ನು ಕೈಗಾರಿಕೆಗಳಿಗೆ ಹೇಗೆ ಸಹಾಯ ಮಾಡುತ್ತೀರಿ? 
ಕೊರೋನಾ ಎಂಬ ಸವಾಲಿನ ಪರಿಸ್ಥಿತಿಯಲ್ಲಿ ಸರ್ಕಾರ ತನ್ನಿಂದ ಆದಷ್ಟು ಕಾರ್ಯಗಳನ್ನು ಮಾಡುತ್ತಿದೆ. ಕೈಗಾರಿಕೋದ್ಯಮಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇವೆ. ವಿದ್ಯುತ್ ಬಿಲ್ ಗಳನ್ನು ಮನ್ನಾ ಮಾಡುತ್ತಿದ್ದೇವೆ. ಇದಲ್ಲದೆ ಸಾಕಷ್ಟು ಪರಿಹಾರಗಳನ್ನು ಘೋಷಣೆ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com