ರಾಮನಗರ: ಅರಣ್ಯಾಧಿಕಾರಿಗಳಿಂದ 2 ಚಿರತೆ ಮರಿಗಳ ಸೆರೆ

ರಾಮನಗರ ಜಿಲ್ಲೆಯಲ್ಲಿ ಚಿರತಣಗಳ ಹಾವಳಿ ಹೆಚ್ಚಾಗಿದ್ದು, ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿ ಬರುತ್ತಿವೆ. ಈ ಹಿಂದೆ ನರಭಕ್ಷಕ ಚಿರತೆ ರಾಮನಗರದಲ್ಲಿ 62 ವರ್ಷದ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಈ ಬೆಳವಣಿಗೆ ಬಳಿಕ ಚಿರತೆ ಸೆರೆಹಿಡಿಯಲು ಬಲೆ ಬೀಸಿದ್ದ ಅರಣ್ಯಾಧಿಕಾರಿಗಳು ಇದೀಗ ಎರಡು ಚಿರತೆ ಮರಿಗಳನ್ನು ಸೆರೆ ಹಿಡಿದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ ಚಿರತಣಗಳ ಹಾವಳಿ ಹೆಚ್ಚಾಗಿದ್ದು, ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿ ಬರುತ್ತಿವೆ. ಈ ಹಿಂದೆ ನರಭಕ್ಷಕ ಚಿರತೆ ರಾಮನಗರದಲ್ಲಿ 62 ವರ್ಷದ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಈ ಬೆಳವಣಿಗೆ ಬಳಿಕ ಚಿರತೆ ಸೆರೆಹಿಡಿಯಲು ಬಲೆ ಬೀಸಿದ್ದ ಅರಣ್ಯಾಧಿಕಾರಿಗಳು ಇದೀಗ ಎರಡು ಚಿರತೆ ಮರಿಗಳನ್ನು ಸೆರೆ ಹಿಡಿದಿದ್ದಾರೆ. 

ಮಾಗಡಿ ತಾಲೂಕಿನ ಸಿಡಗನ ಪಾಳ್ಯ ಹಾಗೂ ಬೋಡಗನಪಾಳ್ಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಎರಡು ಚಿರತೆ ಮರಿಗಳು ಸೆರೆಯಾಗಿವೆ. 

ಮಹಿಳೆಯನ್ನು ಚಿರತೆ ಕೊಂದು ಹಾಕಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹನ್ನೊಂದು ಕಡೆ ಬೋನುಗಳನ್ನು ಇರಿಸಿತ್ತು. ಈ 11 ಬೋನಿನ ಪೈಕಿ 2 ಬೋನುಗಳಲ್ಲಿ ಚಿರತೆ ಮರಿಗಳು ಸೆರೆಸಿಕ್ಕಿವೆ. ಚಿರತೆ ಮಹಿಳೆಯನ್ನು ಕೊಂದು ಹಾಕಿದ್ದ ಸ್ಥಳದಿಂದ 4 ಕಿ.ಮೀ ದೂರದಲ್ಲಿ ಈ ಮರಿ ಚಿರತೆಗಳು ಸೆರೆಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ಸಾವನ್ನಪ್ಪಿದ್ದ ಮಹಿಳೆಯರ ಕುಟುಂಬಸ್ಥರನ್ನು ಅರಣ್ಯ ಸಚಿವ ಆನಂತ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com