ಮೈಸೂರು 5 ಸ್ಟಾರ್ ತ್ಯಾಜ್ಯ ಮುಕ್ತ ನಗರ: ಕೇಂದ್ರದ ಘೋಷಣೆ 

ಮೈಸೂರು ನಗರವನ್ನು 5 ಸ್ಟಾರ್ ತ್ಯಾಜ್ಯ ಮುಕ್ತ ನಗರವನ್ನಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. 
ಮೈಸೂರು 5 ಸ್ಟಾರ್ ತ್ಯಾಜ್ಯ ಮುಕ್ತ ನಗರ: ಕೇಂದ್ರದ ಘೋಷಣೆ
ಮೈಸೂರು 5 ಸ್ಟಾರ್ ತ್ಯಾಜ್ಯ ಮುಕ್ತ ನಗರ: ಕೇಂದ್ರದ ಘೋಷಣೆ

ಮೈಸೂರು: ಮೈಸೂರು ನಗರವನ್ನು 5 ಸ್ಟಾರ್ ತ್ಯಾಜ್ಯ ಮುಕ್ತ ನಗರವನ್ನಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. 

ಮೇ.19 ರಂದು ಕೇಂದ್ರ ಸರ್ಕಾರ ಭಾರತದಲ್ಲಿರುವ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯನ್ನು ಘೋಷಿಸಿದ್ದು ದಕ್ಷಿಣ ಭಾರತದಲ್ಲಿ ಮೈಸೂರು ನಗರ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. 

ಉಳಿದಂತೆ, ಅಂಬಿಕಾಪುರ್, ರಾಜ್ ಕೋಟ್, ಸೂರತ್, ಇಂದೋರ್, ನವಿ ಮುಂಬೈ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ತ್ಯಾಜ್ಯ ಮುಕ್ತವನ್ನಾಗಿ ಮಾಡಲು ಮೈಸೂರು ನಗರ ಪಾಲಿಕೆಯ ಶ್ರಮ ಫಲ ನೀಡಿದೆ. 25 ಪ್ರಮುಖ ನಿಯತಾಂಕಗಳ ಆಧಾರದಲ್ಲಿ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳನ್ನು ಘೋಷಿಸಲಾಗಿದೆ. ಬಗ್ಗೆ ಎಂಸಿಸಿ ಆಯುಕ್ತ ಗುರುದತ್ತ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದು, ಆರೋಗ್ಯ ತಂಡ, ಪೌರ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ್ದಾರೆ. ಸತತ ಎರಡನೇ ಬಾರಿಗೆ 5 ಸ್ಟಾರ್ ರೇಟಿಂಗ್ ಬರುವಂತೆ ಮಾಡಿದ ಕೀರ್ತಿ ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದು ಹೇಳ್ದಿದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com