ಚಿಕ್ಕಮಗಳೂರಿನಲ್ಲಿ ಐದು ಕೊರೋನಾ ಪ್ರಕರಣ ಪತ್ತೆ; ಹಸಿರು ವಲಯಕ್ಕೆ ಶಾಕ್!

ರಾಜ್ಯದಲ್ಲಿ ಹಸಿರು ವಲಯವಾಗಿ ಉಳಿದುಕೊಂಡಿದ್ದ ಜಿಲ್ಲೆ ಚಿಕ್ಕಮಗಳೂರಿಗೆ ಕೂಡ ಈಗ ಕೊರೋನಾ ವಕ್ಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಕೊರೋನಾ ಸೋಂಕು ಕಾಣಿಸಿಕೊಂಡರೂ ಒಂದೇ ಪ್ರಕರಣವಿಲ್ಲದೆ ಹಸಿರು ವಲಯವಾಗಿ ಉಳಿದುಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಹೊಸ ಪ್ರಕರಣಗಳು ವರದಿಯಾಗಿದೆ. 

ಜಿಲ್ಲೆಯ ಕೊಪ್ಪದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮೂವರಿಗೆ ಕೋವಿಡ್-19 ಪತ್ತೆಯಾಗಿದೆ, ಜೊತೆಗೆ, ಇತರ ಭಾಗಗಳಲ್ಲಿದ್ದ ಇಬ್ಬರಿಗೂ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಮರಳಿದ್ದ ಎನ್.ಆರ್.ಪುರ ತಾಲ್ಲೂಕಿನ ಕೆರೆಗದ್ದೆಯ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 7 ಮತ್ತು 10 ವರ್ಷದ ಬಾಲಕ, 17 ವರ್ಷದ ಯುವತಿಗೆ ಕೋವಿಡ್ ದೃಢಪಟ್ಟಿದೆ.

ತರೀಕೆರೆಯ 27 ವರ್ಷದ ಗರ್ಭಿಣಿ ಮತ್ತು ಮೂಡಿಗೆರೆಯ 43 ವರ್ಷ ವೈದ್ಯಾಧಿಕಾರಿಗೆ ಸೋಂಕು ದೃಢಪಟ್ಟಿದೆ.

ಸದ್ಯ ರಾಜ್ಯದಲ್ಲಿ ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳು ಮಾತ್ರ ಹಸಿರು ವಲಯಗಳಾಗಿ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com