ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬರುವವರಿಗೆ ನಿಷೇಧ: ಅನಿವಾಸಿ ಕನ್ನಡಿಗರ ತೀವ್ರ ವಿರೋಧ

ಮೇ 31 ರವರೆಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಿಂದ ಬರುವ ಅನಿವಾಸಿ ಕನ್ನಡಿಗರಿಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಹೊರ ರಾಜ್ಯದಿಂದ ಬಂದವರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ರಾಜ್ಯಗಳ ಒಪ್ಪಂದದ ಮೇರೆಗೆ ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಬರುವುದನ್ನು ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ವಲಸೆ ಕಾರ್ಮಿಕರ ಚಿತ್ರ
ವಲಸೆ ಕಾರ್ಮಿಕರ ಚಿತ್ರ

ಕರ್ನಾಟಕ: ಮೇ 31 ರವರೆಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಿಂದ ಬರುವ ಅನಿವಾಸಿ ಕನ್ನಡಿಗರಿಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಹೊರ ರಾಜ್ಯದಿಂದ ಬಂದವರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ರಾಜ್ಯಗಳ ಒಪ್ಪಂದದ ಮೇರೆಗೆ ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಬರುವುದನ್ನು ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಒಂದೇ ದಿನ 99 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಲಾಕ್ ಡೌನ್ ನಿರ್ಭಂಧ ಸಡಿಲಿಸಲು ನಿರಾಕರಿಸಿತ್ತು.  ಹೊರ ರಾಜ್ಯಗಳಲ್ಲಿರುವ ಕನ್ನಡಿಗರು ತವರಿಗೆ ಮರಳಲು ಹಾತೊರೆಯುತ್ತಿದ್ದಾರೆ, ಹೀಗಿರುವಾಗ ಸರ್ಕಾರ ಅವರನ್ನು ವಾಪಸ್ ಕರೆಸಿಕೊಳ್ಳದಿದ್ದರೇ ಅವರ ಪರಿಸ್ಥಿತಿ ಏನು ಎಂದು ಹಲವರು ಟ್ವಿಟ್ಚರ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು.

"ಕರ್ನಾಟಕವು ಹಲವಾರು ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿತ್ತು, ಆದರೆ ಒಂದು ದಿನದಲ್ಲಿ 99 ಹೊಸ ರೋಗಿಗಳೊಂದಿಗಿನ ಪ್ರಕರಣಗಳಲ್ಲಿ ಅತಿದೊಡ್ಡ ಜಿಗಿತವನ್ನು ಕಂಡ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿದೆ.ಲಾಕ್ ಡೌನ್ ಆರಂಭವಾದಾಗಿನಿಂದ  ನಾನು ನನ್ನ ಕುಟುಂಬದಿಂದ ದೂರ ಉಳಿದಿದ್ದೇನೆ, ಕೇರಳದಿಂದ ವಾಪಸ್ ಬರಲು ಕಾಯುತ್ತಿದ್ದೇನೆ, ಕೊನೆ ಪಕ್ಷ ಮೇ 31ರ ನಂತರವಾದರೂ  ನಾನು ಮನೆಗೆ ಮರಳಲು ಅವಕಾಶ ನೀಡಿ ಎಂದು ಡಿ ಅಶ್ವಿನ್ ಎಂಬುವರು ಮನವಿ ಮಾಡಿದ್ದಾರೆ. 

ಮುಂಬಯಿಂದ ಕರ್ನಾಟಕಕ್ಕೆ ಮರಳಲು ವಲು ಮಂದಿ ಈಗಾಗಲೇ ಇ ಪಾಸ್ ಪಡೆದಿದ್ದಾರೆ. ಪ್ರಯಾಣ ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿ ಇದ್ದಾರೆ, ಸೇವಾಸಿಂಧು ಆ್ಯಪ್ ನಲ್ಲಿ ಈಗಾಗಲೇ ನೋಂದಣಿ ಮಾಡಿಸಿರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ, ಏತನ್ಮಧ್ಯೆ ಕ್ಲೋಸ್ ಆಗಿದ್ದ  ಕಂಪನಿಗಳು ಮತ್ತು ಕಚೇರಿಗಳು ಮತ್ತೆ ತೆರೆದಿದ್ದು, ಕೆಲಸಕ್ಕೆ ಬರುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ತಮಿಳಿನಾಡಿನಿಂದ ನಾವು ಈ ವಾರ ವಾಪಸ್ ಬರಬೇಕೆಂದು ನಿರ್ಧರಿಸಿದ್ದೇವು, ಈ ವಾರವೂ ಬರದಿದ್ದರೇ ನಮ್ಮ ಕೆಲಸಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಿದ್ದೇಶ್ ಎಂಬುವರು ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಈ ಹಿಂದೆ ಲಾಕ್‌ಡೌನ್ ನಿರ್ಬಂಧಗಳನ್ನು ಘೋಷಿಸಿದ ಸಂದರ್ಭದಲ್ಲಿ "ಈ ರಾಜ್ಯಗಳಿಂದ ಬರುವ ಜನರಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಅನುಮತಿ ನೀಡಲಾಗುವುದು" ಎಂದು ಹೇಳಿದ್ದರು.

ಈ ಮೊದಲು ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದಾಗ, ಕೇರಳ ರಾಜ್ಯದಿಂದ ಬರುವವರಿಗೂ ನಿಷೇಧಿಸಲಾಗಿದೆ ಎಂದು ಹೇಳಿದ್ದರು, ಆದರೆ ನಂತರ ಕೇರಳ ದಿಂದ ಬರುವವರಿಗೆ ರಾಜ್ಯದಲ್ಲಿ ನಿಷೇಧ ತೆರವುಗೊಳಿಸಲಾಗಿದೆ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸಿದ ನಂತರ ಹಂತ ಹಂತವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com