ಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಬ್ ಗಳಲ್ಲಿ ಫೈಬರ್ ಶೀಟ್ ಬಳಕೆ

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಜೆ ಸಿ ರೋಡ್ ಸರ್ವಿಸ್ ಸ್ಟೇಷನ್ ಗೆ ಹೋಗಿ ತಮ್ಮ ಕ್ಯಾಬ್ ಗೆ ಹಾರ್ಡ್ ಫೈಬರ್ ಶೀಟ್ ಹಾಕಿಸಿಕೊಂಡಿರುವ ಚಾಲಕ ಇರ್ಶಾದ್(ಹೆಸರು ಬದಲಿಸಲಾಗಿದೆ) ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪ್ರಯಾಣಿಕರ ಮತ್ತು ನನ್ನ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೇರೆ ಕೆಲ ಚಾಲಕರು ಮಾಡಿಸಿರುವುದನ್ನು ನೋಡಿ ನಾನು ಮಾಡಿಸಿಕೊಂಡಿದ್ದೇನೆ. ಇದರಿಂದ ಪ್ರಯಾಣಿಕರಿಗೆ ನಮ್ಮ ಕಾರಿನಲ್ಲಿ ಪ್ರಯಾಣಿಸಬಹುದೆಂದು ಧೈರ್ಯ ಕೂಡ ಬರುತ್ತದೆ. ಚಾಲಕನ ಹತ್ತಿರದ ಸೀಟಿನಲ್ಲಿ ಕೂರಲು ಪ್ರಯಾಣಿಕರಿಗೆ ಬಿಡುವುದಿಲ್ಲ ಎಂದರು.

ಉಬರ್ ನಲ್ಲಿ ಪ್ರಯಾಣಿಕರ ಬಳಿ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಿ ಎಂದು ಕೇಳುತ್ತೇವೆ ಎಂದು ಕಾರ್ ಲುಕ್ ಸರ್ವಿಸ್ ಸ್ಟೇಷನ್ ಮಾಲಿಕ ನೌಶಾದ್ ಲತೀಫ್ ಹೇಳುತ್ತಾರೆ. ಹಳದಿ ಬೋರ್ಡ್ ಖಾಸಗಿ ಟ್ಯಾಕ್ಸಿಯಲ್ಲಿ ಫೈಬರ್ ಶೀಟ್ ಹಾಕಲು ಕಳೆದೊಂದು ವಾರದಿಂದ ಜನ ಒತ್ತಾಯಿಸುತ್ತಿದ್ದಾರೆ. ಈ ಶೀಟ್ ಗೆ 4ರಿಂದ 5 ಸಾವಿರ ರೂಪಾಯಿಗಳಾಗುತ್ತದೆ ಎಂದರು.

ಒಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಶಾ, ಟ್ಯಾಕ್ಸಿಗಳಲ್ಲಿ ಫೈಬರ್ ಶೀಟ್ ಮತ್ತು ಸ್ವಯಂಚಾಲಿತ ಸ್ಪ್ರೇ ಸ್ಯಾನಿಟೈಸರ್ ಇಡಲು ಸರ್ಕಾರ ಆರ್ಥಿಕ ನೆರವು ನೀಡಬೇಕು. ಕ್ಯಾಬ್ ಮತ್ತು ಆಟೋರಿಕ್ಷಾ ಓಡಾಟಕ್ಕೆ ಅನುಮತಿ ನೀಡಿರುವ ರಾಜ್ಯಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಪ್ರಯಾಣಿಕರಿಗೆ ಸಹ ಕ್ಯಾಬ್ ಗಳಲ್ಲಿ ಪ್ರಯಾಣಿಸಲು ಧೈರ್ಯ ಬರುತ್ತದೆ. ಈ ಫೈಬರ್ ಶೀಟ್ ಗಳನ್ನು ಎಲ್ಲಾ ಚಾಲಕರಿಂದ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಅದಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com