ಕೆರೆಗಳಿಗೆ ಕಲುಷಿತ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ: ಬಿಬಿಎಂಪಿ ಎಚ್ಚರಿಕೆ

ಲಾಕ್'ಡೌನ್ ಪರಿಣಾಮ ನಗರದ ಹಲವು ಕೆರೆಗಳಿಗೆ ಸೇರುತ್ತಿದ್ದ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ಇದೇ ಮಾದರಿಯಲ್ಲಿಯೇ ಕೆರೆಗಳ ಸ್ವಚ್ಛತೆಯನ್ನು ಕಾಪಾಡಬೇಕೆಂದು ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಸೂಚನೆ  ನೀಡಿದ್ದಾರೆ. 
ಬಿಬಿಎಂಪಿ (ಸಂಗ್ರಹ ಚಿತ್ರ)
ಬಿಬಿಎಂಪಿ (ಸಂಗ್ರಹ ಚಿತ್ರ)

ಬೆಂಗಳೂರು: ಲಾಕ್'ಡೌನ್ ಪರಿಣಾಮ ನಗರದ ಹಲವು ಕೆರೆಗಳಿಗೆ ಸೇರುತ್ತಿದ್ದ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ಇದೇ ಮಾದರಿಯಲ್ಲಿಯೇ ಕೆರೆಗಳ ಸ್ವಚ್ಛತೆಯನ್ನು ಕಾಪಾಡಬೇಕೆಂದು ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಸೂಚನೆ  ನೀಡಿದ್ದಾರೆ. 

ನಗರದಲ್ಲಿನ ಕೆರೆಗಳಿಗೆ ವ್ಯಾಲಿಗಳು ಹಾಗೂ ರಾಜಕಾಲುವೆಗಳ ಮೂಲಕ ಅಪಾಯಕಾರಿ ತ್ಯಾಜ್ಯದ ಅಂಶ ಸೇರ್ಪಡೆಯಾಗುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ನಿನ್ನೆ ಮೇಯರ್ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. 

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್ ಅವರು, ವೃಷಭಾವತಿ, ಹೆಬ್ಬಾಳ, ಚೆಲ್ಲಘಟ್ಟ, ಕೋರಮಂಗಲ ವ್ಯಾಲಿ ಸೇರಿದಂತೆ ರಾಜಕಾಲುವೆಗಳಿಗೆ ಕೈಗಾರಿಕಾ ತ್ಯಾಜ್ಯ ಸೇರುತ್ತಿತ್ತು. ಲಾಕ್'ಡೌನ್ ನಿಂದ ಕೈಗಾರಿಕೆಗಲು ಸ್ಥಗಿತಗೊಳಿಸಿದ ಪರಿಣಾಮ ಕೆರೆ ಮತ್ತು ರಾಜಕಾಲುವೆಗಳ ನೀರು ಸ್ವಚ್ಚವಾಗಿವೆ. ಜೊತೆಗೆ ಕೊಳಚೆ ನೀರಿನ ಪ್ರಮಾಣ ಕೂಡ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲೂ ಕೆರೆ, ಕಾಲುವೆಗಳಿಗೆ ಕಾರ್ಖಾನೆಗಳ ತ್ಯಾಜ್ಯ ನೀರನ್ನು ಬಿಡದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದ್ದಾರೆ. 

ತ್ಯಾಜ್ಯ ನೀರನ್ನು ಸಂಸ್ಕರಿಸದೆ ಕೆರಗಳಿಗೆ ಬಿಡುವ ಕಾರ್ಖಾನೆಗಳ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಇದೇ ವೇಳೆ ಎಚ್ಚರಿಸಿದ್ದಾರೆ. 

ಬಳಿಕ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ ಅವರು, ನಗರದಲ್ಲಿ ಉದ್ದಿಮೆ ಪರವಾನಗಿ ಪಡೆಯದ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಲು ಕಳುಷಿತ ನೀರನ್ನು ರಾಜಕಾಲುವೆಗೆ ಬಿಡುತ್ತಿವೆ. ಇಂತಹ ಉದ್ದಿಮೆಗಳಿಗೆ ಕಡಿವಾಣ ಹಾಕಲಾಗುತ್ತದೆ. ಅದೇ ರೀತಿ ಕೆರೆಗಳ ಬಫರ್ ಝೋನ್ ಪ್ರದೇಶಗಳಲ್ಲಿ ಕಟ್ಟ ನಿರ್ಮಾಣ ಮಾಡಲು ಪಾಲಿಕೆಯಿಂದ ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ. 

ಈಗಾಗಲೇ ಕೆರಗಳಿಗೆ ನೇರವಾಗಿ ವಿಷಕಾರಿ ತ್ಯಾಜ್ಯ ನೀರನ್ನು ಬಿಡುತ್ತಿದ್ದ ಆರೋಪದ ಮೇಲೆ 496 ಕಾರ್ಖಾನೆ ವಿರುದ್ಧ ಸದ್ಯ ವಿವಿಧ ಪೊಲೀಸ್ ಠಾಣಗಳಲ್ಲಿ ದೂರು ನೀಡಲಾಗಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಲು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com