ಕೊರೋನಾ ಹೆಲ್ತ್ ಬುಲೆಟಿನ್ ನಮೂನೆ ಬದಲಿಸಿದ ಸರ್ಕಾರ: ಮಾಹಿತಿ ಬಚ್ಚಿಡಲು ಯತ್ನ?

ಕೊರೋನಾ ವೈರಸ್ ಹೆಲ್ತ್ ಬುಲಿಟಿನ್ ನಮೂನೆಯನ್ನು ಆರೋಗ್ಯ ಇಲಾಖೆ ಬದಲಾಯಿಸಿದ್ದು, ಬದಲಾದ ಬುಲೆಟಿನ್ ನಲ್ಲಿ ಸೋಂಕಿತರ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸದೇ ಇರುವುದು ಇದೀಗ ಹಲವು ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಂಗಳೂರು: ಕೊರೋನಾ ವೈರಸ್ ಹೆಲ್ತ್ ಬುಲಿಟಿನ್ ನಮೂನೆಯನ್ನು ಆರೋಗ್ಯ ಇಲಾಖೆ ಬದಲಾಯಿಸಿದ್ದು, ಬದಲಾದ ಬುಲೆಟಿನ್ ನಲ್ಲಿ ಸೋಂಕಿತರ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸದೇ ಇರುವುದು ಇದೀಗ ಹಲವು ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ. 

ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಕೊರೋನಾ ಹೆಲ್ತ್ ಬುಲೆಟಿನ್ ವಿಭಿನ್ನವಾಗಿತ್ತು. ಹೆಲ್ತ್ ಬುಲೆಟಿನ್ ನಮೂನೆಯಲ್ಲಿ ಕೇವಲ ಸೋಂಕಿತರ ಸಂಖ್ಯೆಯಷ್ಟೇ ನೀಡಲಾಗಿತ್ತು. ಪ್ರತೀದಿನ ಬಿಡುಗಡೆಯಾಗುತ್ತಿದ್ದ ಬುಲೆಟಿನ್ ನಲ್ಲಿ ಪೇಷಂಟ್ ನಂಬರ್, ಸೋಂಕಿತರ ಮೂಲ, ಲಿಂಗ, ವಯಸ್ಸು, ಟ್ರಾವೆಲ್ ಹಿಸ್ಟರಿ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡಲಾಗುತ್ತಿತ್ತು. ಆದರೆ, ನಿನ್ನೆ ನೀಡಿದ್ದ ಮಾಹಿತಿಯಲ್ಲಿ ಕೇವಲ ಸೋಂಕಿತರ ಸಂಖ್ಯೆ ಮಾತ್ರ ಇದ್ದದ್ದು, ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. 

ಈ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿದ್ದು, ರಾಜ್ಯ ಸರ್ಕಾರ ಸೋಂಕಿತರ ಮಾಹಿತಿಯನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಡುತ್ತಿದೆಯೇ ಎಂಬ ಅನುಮಾನಗಳು ಮೂಡತೊಡಗಿವೆ. 

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಪ್ರತಿಕ್ರಿಯೆ ಕೇಳಿದಾಗ, ಈ ಬಗ್ಗೆ ನನಗೆ ಯಾವುದೇ ಮಾಹಿತಿಗಳಿಲ್ಲ. ಮಾಧ್ಯಮಗಳಲ್ಲಿ ನೋಡಿದಾಗಲೇ ನನಗೂ ವಿಚಾರ ತಿಳಿದದ್ದು ಎಂದು ಹೇಳಿದ್ದಾರೆ. 

ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬದಲಾವಣೆ ಬಗ್ಗೆ ನನಗೂ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಕುಮಾರ್ ಅವರು, ಮುಚ್ಚಿಡಲು ಏನೂ ಇಲ್ಲ. ಮಧ್ಯಾಹ್ನದ ವೇಳೆ ಎಲ್ಲಾ ಮಾಹಿತಿಯನ್ನೂ ಹುಡುಕುವಲ್ಲಿ ಇಲಾಖೆ ಕೆಲ ಸಂಕಷ್ಟಗಳು ಎದುರಾಗುತ್ತಿವೆ. ಹೀಗಾಗಿ ರೋಗಿಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಹಾಕಲಾಗುತ್ತಿದೆ ಎಂದಿದ್ದಾರೆ. 

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಮಾತನಾಡಿ, ಸಾಕಷ್ಟು ಮಾಹಿತಿಗಳನ್ನು ನಾವು ಸಂಗ್ರಹಿಸಬೇಕು. ಇವೆಲ್ಲವೂ ಮಧ್ಯಾಹ್ನದ ವೇಳೆಗೆ ಸಾಧ್ಯವಾಗುವುದಿಲ್ಲ. ಯಾವುದೇ ರಾಜ್ಯಗಳೂ ಕೂಡ ಈ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com