ಕೊರೋನಾ ಭೀತಿ: ಹೊರ ರಾಜ್ಯ ಪ್ರಯಾಣದ ಮೇಲೆ ಸರ್ಕಾರ ನಿರ್ಬಂಧ, ಗಡಿಯಲ್ಲಿ ಸಿಲುಕಿ ವಲಸಿಗರು ಸಂಕಷ್ಟದಲ್ಲಿ!

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹೊರರಾಜ್ಯದಿಂದ ಬರುವ ಜನತೆ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಪರಿಣಾಮ ರಾಜ್ಯ ಪ್ರವೇಶಿಸಲು ಕಾತುರರಾಗಿದ್ದ ವಲಸಿಗರು ಗಡಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹೊರರಾಜ್ಯದಿಂದ ಬರುವ ಜನತೆ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಪರಿಣಾಮ ರಾಜ್ಯ ಪ್ರವೇಶಿಸಲು ಕಾತುರರಾಗಿದ್ದ ವಲಸಿಗರು ಗಡಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುವಂತಾಗಿದೆ. 

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಮಹಾರಾಷ್ಟ್ರ, ಗುಜರಾತ್ ಹಾಗೂ ತಮಿಳುನಾಡು ರಾಜ್ಯಗಳ ಪ್ರಯಾಣದ ಮೇಲೆ ನಿರ್ಬಂಧ ಹೇರಿತ್ತು. 

ಲಾಕ್'ಡೌನ್ ಸಡಿಲಗೊಂಡ ಪರಿಣಾಮ ರಾಜ್ಯಕ್ಕೆ ಆಗಮಿಸಲು ಮುಂಬೈ ತೊರೆದು ಗಡಿಭಾಗಕ್ಕೆ ಬಂದಿದ್ದ ಹಾಸನ, ಉಡುಪಿ, ಚಿಕ್ಕಬಳ್ಳಾಪುರ, ಕಾರವಾರ, ಮಂಗಳೂರು ಹಾಗೂ ಧಾರವಾಡದ 400ಕ್ಕೂ ವಲಸಿಗಲು ಬಂದಿದ್ದರು. ಇದೀಗ ಈ ಎಲ್ಲಾ ಕಾರ್ಮಿಕರು ತಮ್ಮ ಬಳಿಯಿರುವ ಅಲ್ಪ ಮಟ್ಟದ ಹಣ ಹಾಗೂ ಆಹಾರದಿಂದ ಕುಗ್ನೋಳಿ ಚೆಕ್ ಪೋಸ್ಟ್ ಗಳಿ ಸಂಕಷ್ಟ ಅನುಭವಿಸುತ್ತಿದ್ದಾರೆ. 

ಮುಂಬೈನಲ್ಲಿ ಕೂಲಿಗೆ ಕೆಲಸಕ್ಕೆ ಹೋಗಿದ್ದೆವು. ಲಾಕ್'ಡೌನ್ ನಿಂದಾಗಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ಹಣ ಹಾಗೂ ಉದ್ಯೋಗವಿಲ್ಲದೆ ನಮ್ಮ ಬಳಿಯಿದ್ದ ಸಾಕಷ್ಟು ವಸ್ತುಗಳನ್ನು ಮಾರಾಟ ಮಾಡಿದ್ದೇವೆಂದು ಕಾರ್ಮಿಕರೊಬ್ಬರು ಹೇಳಿದ್ದಾರೆ. 

ಸಂಕಷ್ಟದಲ್ಲಿರುವ ವಲಸಿಗರು ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಡಿಸಿ ಎಸ್ ಬೊಮ್ಮನಹಳ್ಳಿ ಹಾಗೂ ಎಸ್'ಪಿ ಲಕ್ಷ್ಮಣ್ ನಿಂಬರ್ಗಿಯವರನ್ನು ಭೇಟಿ ಮಾಡಿ, ರಾಜ್ಯ ಪ್ರವೇಶಿಸಲು ಅವಕಾಶ ಮಾಡಿಕೊಟ್ಟು, ಕ್ವಾರಂಟೈನ್ ನಲ್ಲಿರಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಂಬರ್ಗಿಯವರು, ಇ ಪಾಸ್ ಗಳಿಲ್ಲದೆ ರಾಜ್ಯದೊಳಗೆ ಪ್ರವೇಶ ಮಾಡಲು ಅನುಮತಿ ನೀಡುವುದು ಅತ್ಯಂತ ಕಠಿಣವಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡುವವರೆಗೂ ಮಹಾರಾಷ್ಟ್ರದ ಕಾಗಲ್ ಅಥವಾ ಕೊಲ್ಹಾಪುರದಲ್ಲಿ ಉಳಿದುಕೊಳ್ಳುವಂತೆ ತಿಳಿಸಿದ್ದೇವೆ. ಆ ಪ್ರದೇಶದಲ್ಲಿ ಅವರಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದೇವೆ. ಆದರೆ, ಕೆಲವರು ರಾಜ್ಯ ಪ್ರವೇಶಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com