ಬೆಂಗಳೂರು: 10 ದಿನಗಳಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳಿದ 1 ಲಕ್ಷ ವಲಸೆ ಕಾರ್ಮಿಕರು

ವಲಸೆ ಕಾರ್ಮಿಕರಿಗಾಗಿ ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಕಳೆದ 10 ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಜಿಲ್ಲೆಗಳಿಗೆ ಸುಮಾರು 1,18,992 ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಲಸೆ ಕಾರ್ಮಿಕರಿಗಾಗಿ ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಕಳೆದ 10 ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಜಿಲ್ಲೆಗಳಿಗೆ ಸುಮಾರು 1,18,992 ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.

ಈ ವಲಸೆ ಕಾರ್ಮಿಕರಿಗಾಗಿ ಒಟ್ಟು 4,037 ಟ್ರಿಪ್ ಗಳಲ್ಲಿ ಬೆಂಗಳೂರಿನಿಂದ 2,390 ಟ್ರಿಪ್ ಬೆಂಗಳೂರಿನಿಂದ ಉಚಿತವಾಗಿ ಪ್ರಯಾಣಿಕರನ್ನು ಕರೆದೊಯ್ದಿವೆ.ಪ್ರತಿ ಕಾರ್ಮಿಕರಿಗೂ ಸ್ಕ್ರೀನಿಂಗ್ ಮಾಡುವುದು ಮತ್ತು ಪರೀಕ್ಷಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಸಾವಿರಾರು ಮಂದಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿದ್ದರು, ಇವರಿಗೆಲ್ಲಾ  ಸಾಮಾಜಿಕ ಅಂತರ
ಕಾಯ್ದುಕೊಳ್ಳುವುದು ಸೇರಿದಂತೆ ಹೈಜೀನ್ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 150 ಕರೋನಾ ವಾರಿಯರ್ಸ್ ಇವರಿಗೆಲ್ಲಾ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದರು.

ವಲಸೆ ಕಾರ್ಮಿಕರನ್ನು ನಿರ್ವಹಿಸುವುದು ಬಹು ದೊಡ್ಡ ಸವಾಲಾಗಿತ್ತು, ಬೇರೆ ರಾಜ್ಯಗಳಿಗೆ ರೈಲು ಸೇವೆ ಆರಂಭಿಸಿದ ನಂತರ ಮೆಜೆಸ್ಟಿಕ್ ನಿಂದ ಅವರನ್ನು ರೈಲು ನಿಲ್ದಾಣಕ್ಕೆ ಕರೆ ತರಲಾಯಿತು ಎಂದು ಕೊರೋನಾ ವಾರಿಯರ್ ಪ್ರದೀಪ್ ಆರ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com