ಕೊರೋನಾ ಭೀತಿ ನಡುವಲ್ಲೇ ಜಿರಾಫೆ ಮರಿ ದತ್ತು ಪಡೆದ ವಿಂಗ್ ಕಮಾಂಡರ್ ಜಿಬಿ ಅತ್ರಿ

ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 
ಜಿರಾಫೆ ಮರಿ
ಜಿರಾಫೆ ಮರಿ

ಬೆಂಗಳೂರು: ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

18 ತಿಂಗಳ ಜಿರಾಫೆ ಯದುನಂದನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದದಲ್ಲಿದ್ದು, ಈ ಜಿರಾಫೆಯನ್ನು ಅತ್ರಿಯವರು ದತ್ತು ತೆಗೆದುಕೊಂಡಿದ್ದಾರೆ. 

ನಾನು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈಗಾಗಲೇ 19 ಸುತ್ತಿನ ಕೀಮೋಥೆರಪಿಯನ್ನು ಪಡೆದುಕೊಂಡಿದ್ದೇನೆ. ಮತ್ತೊಂದು ಸುತ್ತಿನ ಚಿಕಿತ್ಸೆ ಪಡೆಯಬೇಕಿದೆ. ನನ್ನ ಕೊನೆಯ ದಿನಗಳ ಏಣಿಕೆ ಆರಂಬವಾಗಿದೆ. ಬಾಯಿ ಇಲ್ಲದ ಪ್ರಾಣಿಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಕೊಂಡಿದ್ದೆ. ನನ್ನ 2 ವರ್ಷದ ಮೊಮ್ಮಗನೇ ಜಿರಾಫೆ ದತ್ತು ತೆಗೆದುಕೊಳ್ಳಲು ಪ್ರೇರಣೆಯಾಗಿದ್ದ. ಈ ಬಗ್ಗೆ ನಾನು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೆ. ಎಲ್ಲರೂ ಒಪ್ಪಿಗೆ ನೀಡಿದ್ದರು. ಕುಟುಂಬದ ಸಾಕಷ್ಟು ಮಂದಿ ಹುಲಿ ಹಾಗೂ ಸಿಂಹಕ್ಕೆ ಮತ ನೀಡಿದ್ದರು. ಆದರೆ, ನನ್ನ ಮೊಮ್ಮಗ ಜಿರಾಫೆ ಪರವಾಗಿ ಮತ ನೀಡಿದ್ದ. ದುರ್ಬಲವೆಂದು ಘೋಷಿಸಲ್ಪಟ್ಟ ಒಂದು ಜಾತಿಯ ಪ್ರಾಣಿ ಇದಾಗಿದ್ದು, ಅವುಗಳ ರಕ್ಷಣೆ ಅಗತ್ಯವಿದೆ ಎಂಬುದು ಈ ವೇಳೆ ನನಗೆ ಅರ್ಥವಾಯಿತು. ಇಂತಹ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಹೀಗಾಗಿ ಜಿರಾಫೆ ಮರಿ ದತ್ತು ಪಡೆದು, ಅದರ ಸಂರಕ್ಷಣೆಗ ರೂ.1 ಲಕ್ಷ ನೀಡಲು ಮುಂದಾದೆ ಎಂದು ಅತ್ರಿ ತಿಳಿಸಿದ್ದಾರೆ. 

ಇದು ನಮ್ಮ ಮದು, ನಾನು ಬದುಕಿರುವವರೆಗೂ ಜಿರಾಫೆ ಖರ್ಚಾಗಿ ರೂ.1 ಲಕ್ಷ ನೀಡುತ್ತೇನೆ. ನನ್ನ ಮರಣದ ಬಳಿಕ ನನ್ನ ಕುಟುಂಬಸ್ಥರು ನನ್ನ ಇಚ್ಛೆಯನ್ನು ಈಡೇರಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com