ಬೆಂಗಳೂರು: ಸಿಗರೇಟ್ ಲಂಚ ಪ್ರಕರಣ, ಭ್ರಷ್ಟ ಪೊಲೀಸ್ ಅಧಿಕಾರಿಗಳ‌ ಮೇಲೆ ಎಸಿಬಿ‌ ದಾಳಿ

ಬೆಳ್ಳಂಬೆಳಗ್ಗೆ ಭ್ರಷ್ಟ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಆರ್ ಎಂ ಅಜಯ್, ನಿರಂಜನ್ ಕುಮಾರ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ

ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಆರ್ ಎಂ ಅಜಯ್, ನಿರಂಜನ್ ಕುಮಾರ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 
ಸಿಗರೇಟ್ ವಿತರಕರು ಮತ್ತು‌ ನಕಲಿ ಮಾಸ್ಕ್ ಮಾರಾಟಗಾರರಿಂದ ಕೊಟ್ಯಂತರ ರೂ. ಲಂಚ ಪಡೆದ ಆರೋಪದಡಿ ದಾಳಿ ನಡೆಸಲಾಗಿದೆ‌.

ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಅವರ ನಿವಾಸ ಸೇರಿ ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ಅವರ ಹೆಚ್ ಆರ್ ಬಿ ಆರ್ ಲೇಔಟ್ ಮನೆ, ನಿರಂಜನ್ ಕುಮಾರ್ ಅವರ ಬಸವೇಶ್ವರ ನಗರ ನಿವಾಸ, ಮೈಸೂರು ಸರ್ಕಲ್ ಬಳಿಯ ಸಿಸಿಬಿ ಆರ್ಥಿಕ ಅಪರಾದ ದಳದ ಎಸಿಪಿ ಕಚೇರಿ ಮತ್ತು ಖಾಸಗಿ ಮಧ್ಯವರ್ತಿಯಾಗಿದ್ದ ಬಾಬು ರಾಜೇಂದ್ರ ಎಂಬುವವರ ಯಲಹಂಕ ಉಪನಗರದಲ್ಲಿರುವ ನಿವಾಸ ಹಾಗೂ ಆದೀಲ್ ಅಜೀಜ್ ಎಂಬುವವರ ಶಾಂತಿನಗರದಲ್ಲಿನ ನಿವಾಸನ ನಿವಾಸ ಸೇರಿ ಭೂ಼ಷಣ್ ಎಂಬುವವರ ಯಲಹಂಕದ ಉಪನಗರದಲ್ಲಿನ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.

ನಗರದ ಏಳು ಕಡೆ ಡಿಎಸ್ ಪಿ ರಾಜೇಂದ್ರ ನೇತೃತ್ವದ ತಂಡ ವಿವಿದೆಡೆ ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್ ಡೌನ್ ನಡುವೆ ಸಿಸಿಬಿಯ ಈ ಮೂವರು ಭ್ರಷ್ಟ ಅಧಿಕಾರಿಗಳು ಕೋಟಿ ಕೋಟಿ ಡೀಲ್​ ನಡೆಸಿದ್ದರು. ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡಿ ಲಂಚ ಪಡೆದಿದ್ದರು. ಡೀಲ್​ ವ್ಯವಹಾರ ಬಯಲಿಗೆ ಬರುತ್ತಿದ್ದಂತೆ ಮೂವರು ಸಿಸಿಬಿ ಅಧಿಕಾರಿಗಳನ್ನು ಅಮಾನತು ಮಾಡಿ, ಬಳಿಕ ಪ್ರಕರಣದ ತನಿಖೆಯನ್ನು ಎಸಿಬಿಗೆ ವರ್ಗಾಯಿಸಲಾಗಿತ್ತು.

ಗುರುವಾರವಷ್ಟೇ ಲಂಚ ಪಡೆದ ಆರೋಪದಡಿ ಮೂವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಮೂರು ಪ್ರತ್ಯೇಕ ಎಫ್.ಐ.ಆರ್ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com