ಬೆಂಗಳೂರು: ಸೀಲಿಂಗ್ ಕುಸಿದು ಬಿದ್ದು ಅವಘಡ, ಕ್ವಾರಂಟೈನ್‌ನಲ್ಲಿದ್ದವರು ಪಾರು

ಹೊರದೇಶದಿಂದ ಬಂದು ನಗರದ ಮೆಜೆಸ್ಟಿಕ್ ಬಳಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿರುವ ಕುಟುಂಬವೊಂದು ಹೋಟೆಲ್ ನಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಡೆದಿದೆ.

Published: 22nd May 2020 04:54 PM  |   Last Updated: 22nd May 2020 04:54 PM   |  A+A-


Ceilling_Collapse1

ಸೀಲಿಂಗ್ ಕುಸಿತ

Posted By : Nagaraja AB
Source : UNI

ಬೆಂಗಳೂರು: ಹೊರದೇಶದಿಂದ ಬಂದು ನಗರದ ಮೆಜೆಸ್ಟಿಕ್ ಬಳಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿರುವ ಕುಟುಂಬವೊಂದು ಹೋಟೆಲ್ ನಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಡೆದಿದೆ.

ವಿದೇಶದಿಂದ ಬಂದು ಮೆಜೆಸ್ಟಿಕ್ ಬಳಿ ಹೋಟೆಲ್ ಒಂದರಲ್ಲಿ ಹಣ ಪಾವತಿಸಿ ಮೀನಾಕ್ಷಿ ವೆಂಕಟರಮಣ ಎನ್ನುವರ ಕುಟುಂಬ ತಂಗಿತ್ತು. ಮೀನಾಕ್ಷಿ ಅವರು ಸ್ನಾನ ಮಾಡುವಾಗ ಹೋಟೆಲ್‌ನ ಬಾತ್‌ರೂಮ್‌ನ ಸೀಲಿಂಗ್ ಕುಸಿದು ಬಿದ್ದದ್ದು ಮೀನಾಕ್ಷಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಸೀಲಿಂಗ್ ಅವಸ್ಥೆ ಬಗ್ಗೆ ಮೀನಾಕ್ಷಿ ಅವರು ಹೋಟೆಲ್ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಹೋಟೆಲ್‌ ನವರು ನಿರ್ಲಕ್ಷ್ಯವಹಿಸಿದ್ದರು ಎಂದು ಮೀನಾಕ್ಷಿ ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಮೀನಾಕ್ಷಿ ಅವರ ಮಗ ಟ್ವಿಟ್ಟರ್‌ಗೆ ಹಾಕಿ ಕ್ಟಾರಂಟೈನ್ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಇಲ್ಲಿಗೆ ಏಳು ದಿನಗಳು ಬಂದಿದ್ದೇವೆ. ಆದರೆ, ನಮ್ಮ ಸ್ವ್ಯಾಬ್ ಪರೀಕ್ಷೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ನಮಗೆ ತಿಳಿದಿಲ್ಲ.

ನಾವು ವಿಚಾರಿಸಿದಾಗ, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಮಾತ್ರ ಆದೇಶವಿದೆ ಎಂದು ನಮಗೆ ತಿಳಿಸಿದ್ದಾರೆ. ನಮ್ಮನ್ನು ಇಂತಹ ಕೆಟ್ಟ ಹೋಟೆಲ್‌ನಲ್ಲಿ ಉಳಿಯಲು ಬಿಟ್ಟು ಹೋಟೆಲ್ ಬಿಲ್ ಕಟ್ಟಿಸುತ್ತಿದ್ದಾರೆ'' ಎಂದು ಮೀನಾಕ್ಷಿ ಅವರು ದೂರಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp