ಈರುಳ್ಳಿ ಖರೀದಿಸಿ ರೈತ ಮಹಿಳೆ ನೆರವಿಗೆ ನಿಂತ ಹೂವಿನಹಡಗಲಿ ತಹಸಿಲ್ದಾರ್

ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.
ಈರುಳ್ಳಿ ಖರೀದಿ ಮಾಡಿದ ತಹಸಿಲ್ದಾರ್ ವಿಜಯಕುಮಾರ್
ಈರುಳ್ಳಿ ಖರೀದಿ ಮಾಡಿದ ತಹಸಿಲ್ದಾರ್ ವಿಜಯಕುಮಾರ್

ಹೊಸಪೇಟೆ: ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.

ಹೌದು.. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಇಲ್ಲಿನ ರೈತರು ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಖರೀದಿ ಮಾಡಿ ಅವರ ಬೆನ್ನಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಸೂಕ್ತ ಮಾರುಕಟ್ಟೆಯೂ  ಕಂಗಾಲಾಗಿದ್ದ ಇಬ್ಬರು ರೈತರ ಈರುಳ್ಳಿಯನ್ನು ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಖರೀದಿ ಮಾಡಿದ್ದಾರೆ. 

ತಾಲೂಕಿನ ಕೊಯಿಲಾರಗಟ್ಟಿ ತಾಂಡದ ರತ್ನಾಬಾಯಿ ಎಂಬ ರೈತ ಮಹಿಳೆ, ತಾನು ಬೆಳೆದ ಈರುಳ್ಳಿಯಿಂದ ಬಂದ ಆದಾಯದಿಂದ ಮಗಳ ಮದುವೆ ಮಾಡಲು ಸಿದ್ದತೆ ನಡೆಸಿದ್ದರು. ಆದರೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ತಹಸಿಲ್ದಾರ್ ವಿಜಯ್  ಕುಮಾರ್ ಅವರು ರೈತ ಮಹಿಳೆ ರತ್ನಾಬಾಯಿ ಅವರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಯಿಲಾರ ಗಟ್ಟಿ ತಾಂಡದ ರತ್ನಾ ಬಾಯಿ ಮತ್ತು ಮೇಟ್ಯಾನಾಯ್ಕ್ ಎಂಬ ರೈತ ಮಹಿಳೆಯರಿಂದ ಈರುಳ್ಳಿ ಖರೀದಿ ಮಾಡಿದ್ದಾರೆ. ಈರುಳ್ಳಿ ಲಾರಿಯನ್ನು ಕಛೇರಿಗೆ ಕರೆಸಿ 80 ಚೀಲ ಈರುಳ್ಳಿಯನ್ನು  ತಲಾ 350ರೂಪಾಯಿಂತೆ ತಾವೇ ಖರೀದಿಸಿದ್ದಾರೆ. ಅಲ್ಲದೆ ಹೀಗೆ ಖರೀದಿ ಮಾಡಿದ ಈರುಳ್ಳಿಯನ್ನು ತಮ್ಮ ಕಛೇರಿಯ ಪ್ರತಿ ಸಿಬ್ಬಂದಿಗೆ ಹಂಚಿಕೆ ಮಾಡಿದ್ದಲ್ಲದೆ ಇನ್ನುಳಿದ ಮೂರು ಇಲಾಖೆಗೆ ಹಂಚಿಕೆ ಮಾಡಿ ಹಣ ಸಂಗ್ರಹಿಸಿ ರೈತರಿಗೆ ನೀಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ರೈತ ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com