ಕೆಆರ್ ಪೇಟೆ ಮುಖ್ಯ ಪೇದೆಯಲ್ಲಿ ಕೊರೋನಾ ದೃಢ: 2 ಪೊಲೀಸ್ ಠಾಣೆಗಳು ಸೀಲ್ಡೌನ್

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಆರ್ಪೇಟೆಯ ಟೌನ್ ಮತ್ತು ಗ್ರಾಮಾಂತರ ಠಾಣೆಗಳನ್ನು ಇಂದು ರಾತ್ರಿ ಸೀಲ್ಡೌನ್ ಮಾಡಲಾಗಿದೆ.
ಪೊಲೀಸರು
ಪೊಲೀಸರು

ಮಂಡ್ಯ: ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಆರ್ಪೇಟೆಯ ಟೌನ್ ಮತ್ತು ಗ್ರಾಮಾಂತರ ಠಾಣೆಗಳನ್ನು ಇಂದು ರಾತ್ರಿ ಸೀಲ್ಡೌನ್ ಮಾಡಲಾಗಿದೆ.

ಕೆ.ಆರ್.ಪೇಟೆ ಟೌನ್ ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದ ಪಿ.೧೫೯೭ ಸಂಖ್ಯೆಯ ಮುಖ್ಯಪೇದೆ (ನಾಗರಾಜು)ಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಪಟ್ಟಣದ ಸಿಪಿಐ ಕಛೇರಿ ಮತ್ತು ಕೆಆರ್ಪೇಟೆಯ ಟೌನ್ ಮತ್ತು ಗ್ರಾಮಾಂತರ ಠಾಣೆಗಳ ಸುಮಾರು ೨೫ ಕ್ಕೂ ಹೆಚ್ಚು ಪೊಲೀಸರಿಗೀಗ ಸಂಕಷ್ಠ ಎದುರಾಗಿದೆ.

ಹಿನ್ನೆಲೆ; ಕೆ.ಆರ್.ಪೇಟೆ ಟೌನ್ ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದಲ್ಲಿದ್ದ ಮುಖ್ಯಪೇದೆ ನಾಗರಾಜು ಮಹಾರಾಷ್ಟçದ ಬಾಂಬೆಯಿAದ ಬಂದವರನ್ನು ಕ್ವಾರಂಟೈನ್ನಲ್ಲಿರಿಸುವ ಕಾರ್ಯನಿರ್ವಹಿಸುತ್ತಿದ್ದರು. ಕ್ವಾರಂಟೈನ್ ನಲ್ಲಿದ್ದವರ ಸಂಪರ್ಕದಲ್ಲಿದ್ದುದರಿಂದ ಕಳೆದ ಮರ್ನಾಲ್ಕು ದಿನಗಳ ಹಿಂದೆಯಷ್ಟೇ ಮುಖ್ಯಪೇದೆ ನಾಗರಾಜುಗೂ ಸಹ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದ್ದು ಇಂದು ಸಂಜೆ ಬಂದ ವರದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್.ಪೇಟೆಗೆ ಆಗಮಿಸಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್,ಪಟ್ಟಣದಟೌನ್ ಮತ್ತು ಗ್ರಾಮಾಂತರ ಠಾಣೆ,ಸಿಪಿಐ ಕಛೇರಿಯನ್ನು ಸೀಲ್ಡೌನ್ ಮಾಡಿಸಿದ್ದಾರೆ.ಈ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ಗೆ ಒಳಪಡುವಂತೆ ಸೂಚಿಸಿದ್ದಾರೆ.

ಠಾಣೆಗೆ ಪರ್ಯಾಯ ವ್ಯವಸ್ಥೆ;
ಪತ್ರಿಕೆಯೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ,ಮುಖ್ಯಪೇದೆ ನಾಗರಾಜುಗೆ ಕೊರೊನಾ ಪಾಸಿಟಿವ್ ಪತ್ತೆಯಾದಪರಿಣಾಮ ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.ಅಲ್ಲಿನ ಕೆಲಸ ಕಾರ್ಯಗಳಿಗೆ ಪರ್ಯಾಯವಾಗಿ ಸ್ಥಳೀಯ ಕಟ್ಟಡವೊಂದರಲ್ಲಿ  ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸೀಲ್ಡೌನ್ ಆದ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೨೫ ಮಂದಿ ಪೊಲೀಸರ ಜೊತೆಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿರುವ ಮುಖ್ಯಪೇದೆಯ ಪತ್ನಿ ಮತ್ತು ಪುತ್ರನನ್ನು ಸಹ ಕ್ವಾರಂಟೈನ್ಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಹೊಸದಾಗಿ ಕರ್ತವ್ಯ ನಿರ್ವಹಿಸಲು ಇಬ್ಬರು ಸಿಪಿಐ,ಇಬ್ಬರು ಪಿಎಸೈ ಮತ್ತು ೩೦ ಜನರು ಪೋಲಿಸ್ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ.ಕೋವಿಡ್ ಕರ್ತವ್ಯಕ್ಕೆ ಧಕ್ಕೆ ಉಂಟಾಗದAತೆ ವಿಶೇಷ ಪೋಲಿಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಕ್ವಾರಂಟೈನ್ ಕೇಂದ್ರಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ ಎಂದರು.

ಗ್ರಾಮಕ್ಕೆ ಹೊರ ರಾಜ್ಯಗಳಿಂದ ಕಳ್ಳ ಮಾರ್ಗದಿಂದ ನುಸುಳಿ ಬರುವ ಜನರ ಬಗ್ಗೆ ಗ್ರಾಮಸ್ಥರು ಕೂಡಲೇ ಮಾಹಿತಿಯನ್ನು ನೀಡಬೇಕು..ತಾಲ್ಲೂಕಿಗೆ ಯಾರೇ ಹೊಸದಾಗಿ ಆಗಮಿಸಿದರೆ ೧೪ ದಿನಗಳು ಹೋಂ ಕ್ವಾರಂಟೈನ್ ನಲ್ಲಿರುವುದು, ಕೋರೋನಾ ಸ್ವಾಬ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಡಿವೈಎಸ್ ಪಿ ಅರುಣ್ ನಾಗೇಗೌಡ, ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಯೋಗೇಶ್, ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ಡಿ.ಲಕ್ಷ್ಮಣ್ ಮತ್ತು ಪೋಲಿಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com