ಮದ್ಯ ಉದ್ಯಮಿಗಳಿಗೆ ಗುಡ್ ನ್ಯೂಸ್: ಪರವಾನಗಿ ಶುಲ್ಕದಲ್ಲಿ ಶೇ.10ರಷ್ಟು ಕಡಿತ ಮಾಡಲು ಸರ್ಕಾರ ಚಿಂತನೆ?

ಕರ್ನಾಟಕದ ಲಿಕ್ಕರ್ ಉದ್ಯಮಕ್ಕೆ ಇಲ್ಲಿದೆ ಶುಭಸುದ್ದಿ. ಕೊರೋನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳು ಉದ್ಯಮವಿಲ್ಲದೆ ಕಷ್ಟವಾಗಿರುವಾಗ ಅದಕ್ಕೆ ಸಹಾಯ ಮಾಡಲು ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇಕಡಾ 10ರಷ್ಟು ಕಡಿತ ಮಾಡಲು ಮತ್ತು ಎರಡು ಕಂತುಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡುವುದನ್ನು ಸರ್ಕಾರ ಪರಿಶೀಲಿಸುತ್ತಿದೆ.

Published: 23rd May 2020 11:11 AM  |   Last Updated: 23rd May 2020 01:07 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಕರ್ನಾಟಕದ ಲಿಕ್ಕರ್ ಉದ್ಯಮಕ್ಕೆ ಇಲ್ಲಿದೆ ಶುಭಸುದ್ದಿ. ಕೊರೋನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳು ಉದ್ಯಮವಿಲ್ಲದೆ ಕಷ್ಟವಾಗಿರುವಾಗ ಅದಕ್ಕೆ ಸಹಾಯ ಮಾಡಲು ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇಕಡಾ 10ರಷ್ಟು ಕಡಿತ ಮಾಡಲು ಮತ್ತು ಎರಡು ಕಂತುಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡುವುದನ್ನು ಸರ್ಕಾರ ಪರಿಶೀಲಿಸುತ್ತಿದೆ.

ಈ ಬಗ್ಗೆ ಉನ್ನತ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಸಿಕ್ಕಿದ್ದು, ಲಿಕ್ಕರ್ ಉದ್ಯಮದ ಪ್ರತಿನಿಧಿಗಳು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಪರವಾನಗಿ ಶುಲ್ಕದಲ್ಲಿ ರಿಯಾಯಿತಿ ನೀಡಲು ಸಹಾಯ ಮಾಡುವಂತೆ ಕೋರಿದ್ದರು. ಅದಕ್ಕೆ ಸರ್ಕಾರ ಶೇಕಡಾ 10ರಷ್ಟು ಪರವಾನಗಿ ಶುಲ್ಕವನ್ನು ಕಡಿತ ಮಾಡಿ ಉದ್ಯಮಿಗಳು ಎರಡು ಕಂತುಗಳಲ್ಲಿ ಅದನ್ನು ಪಾವತಿಸುವಂತೆ ಅವಕಾಶ ಮಾಡಿಕೊಡಲಿದೆ ಎಂದು ತಿಳಿದುಬಂದಿದೆ.

ಅಬಕಾರಿ ಶುಲ್ಕವನ್ನು ಕರ್ನಾಟಕದಲ್ಲಿ ವಾರ್ಷಿಕವಾಗಿ ಜೂನ್ 1ಕ್ಕೆ ಮುನ್ನ ಕಟ್ಟಲಾಗುತ್ತದೆ. ಪಬ್ ಮತ್ತು ಬಾರ್ ಗಳಿಗೆ(ಸಿಎಲ್ 9 ಅನುಮತಿಗಳು) ಪ್ರದೇಶದ ಜನಸಂಖ್ಯೆಯನ್ನು ಆಧರಿಸಿ ವರ್ಷಕ್ಕೆ ಪರವಾನಗಿ ಶುಲ್ಕ 4 ಲಕ್ಷದಿಂದ 7.5 ಲಕ್ಷದವರೆಗೆ ಇರುತ್ತದೆ. ಜೊತೆಗೆ ಹೆಚ್ಚುವರಿಯಾಗಿ ಅಬಕಾರಿ ಶುಲ್ಕ ಶೇಕಡಾ 15ರಷ್ಟು ಇರುತ್ತದೆ. ಒಟ್ಟಾರೆ ಎಲ್ಲಾ ಶುಲ್ಕಗಳು ಸೇರಿ 10 ಲಕ್ಷವಾಗುತ್ತದೆ. ಚಿಲ್ಲರೆ ಲಿಕ್ಕರ್ ಅಂಗಡಿಗಳಿಗೆ ಪರವಾನಗಿ ಶುಲ್ಕ 4ರಿಂದ 6 ಲಕ್ಷಗಳಾಗುತ್ತದೆ. ಮೈಕ್ರೊಬ್ರಿವರೀಸ್ ಗಳಿಗೆ 2 ಲಕ್ಷ ಮತ್ತು ಶೇಕಡಾ 50ರಷ್ಟು ಮೊದಲೇ ಭರಿಸಬೇಕಾಗುತ್ತದೆ.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp