ಕೋವಿಡ್-19: ಲಕ್ಷಣಗಳಿಲ್ಲದಿದ್ದರೂ ವಿದೇಶಗಳಿಂದ ಬಂದ ಎಲ್ಲಾ ಪ್ರಯಾಣಿಕರಿಗೂ ಕ್ವಾರಂಟೈನ್ ಕಡ್ಡಾಯ!

ಕೊರೋನಾ ಮಾರ್ಗಸೂಚಿಗಳನ್ನು ಮರುಪರಿಶೀಲನೆ ನಡೆಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಲಕ್ಷಣ ಇದ್ದರೂ, ಇಲ್ಲದೇ ಹೋದರೂ ವಿದೇಶಗಳಿಂದ ಬಂದ ಪ್ರತೀಯೊಬ್ಬ ಪ್ರಯಾಣಿಕನಿಗೂ ಕ್ವಾರಂಟೈನ್ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಮಾರ್ಗಸೂಚಿಗಳನ್ನು ಮರುಪರಿಶೀಲನೆ ನಡೆಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಲಕ್ಷಣ ಇದ್ದರೂ, ಇಲ್ಲದೇ ಹೋದರೂ ವಿದೇಶಗಳಿಂದ ಬಂದ ಪ್ರತೀಯೊಬ್ಬ ಪ್ರಯಾಣಿಕನಿಗೂ ಕ್ವಾರಂಟೈನ್ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. 

ಲಕ್ಷಣ ಇರುವ ಹಾಗೂ ಲಕ್ಷಣ ಇಲ್ಲದಿರುವವರಿಗೆ ವಿಧಿಸುವ ಕ್ವಾರಂಟೈನ್ ನಲ್ಲಿ ಅಲ್ಪ ಮಟ್ಟಿನ ವ್ಯತ್ಯಾಸಗಳಿರಲಿವೆ. ಲಕ್ಷಣ ಕಾಣಿಸಿಕೊಂಡ ಪ್ರಯಾಣಿಕರನ್ನು 14 ದಿನಗಳ ಐಸೋಲೇಷನ್ ಆಸ್ಪತ್ರೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಿದ್ದು, ಲಕ್ಷಣ ಇಲ್ಲದಿರುವವರನ್ನು 14 ದಿನಗಳ ಕಾಲ ಹೋಟೆಲ್ ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, ಲಕ್ಷಣ ಇಲ್ಲದ ಪ್ರಯಾಣಿಕರ ಕೈಗಳ ಮೇಲೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವಂತೆ ಮುದ್ರೆ ಹಾಕಲಾಗುತ್ತಿದೆ. ಗರ್ಭಿಣಿ ಮಹಿಳೆಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಲು, 80 ವರ್ಷಕ್ಕಿಂತಲೂ ಹೆಚ್ಚಿನ ಹಿರಿಯ ನಾಗರೀಕರನ್ನು ಆರ್'ಟಿ ಹಾಗೂ ಪಿಸಿಆರ್ ತಂತ್ರದ ಮೂಲಕ ಪರೀಕ್ಷೆಗೊಳಪಡಿಸಲಾಗುತ್ತದೆ. ಪರೀಕ್ಷೆಯಲ್ಲಿ ವೈರಸ್ ಇಲ್ಲ ಎಂದು ದೃಢಪಟ್ಟರೂ ಕೂಡ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಮುದ್ರೆ ಹಾಕಲಾಗುತ್ತದೆ. ಲಕ್ಷಣ ಕಂಡು ಬಂದರೆ, ಆಸ್ಪತ್ರೆಗಳಲ್ಲಿ ಐಸೋಲೇಷನ್ ನಲ್ಲಿರಿಸಲಾಗುತ್ತದೆ. ಎಲ್ಲಾ ಪರೀಕ್ಷೆಗಳಲ್ಲೂ ವೈರಸ್ ಇರುವುದು ದೃಢಪಟ್ಟಿದ್ದ ಆದರೆ, ಕೂಲೇ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತದೆ 

ಲಕ್ಷಣ ಇಲ್ಲದವರನ್ನು ಹಾಸ್ಟೆಲ್ ಹಾಗೂ ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿಸಿ 12 ಮತ್ತು 14 ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com