ಕೊರೋನಾ: ಮನೆ ಮನೆ ಸಮೀಕ್ಷಾ ವರದಿಯಿಂದ ಹಿರಿಯ ನಾಗರೀಕರ ರಕ್ಷಣೆಗೆ ಸಹಾಯ

ಕೊರೋನಾದಿಂದ ಹಿರಿಯ ನಾಗರೀಕರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕ್ರಮಗಳ ಪೈಕಿ ಮನೆ ಮನೆಗಳಿಗೆ ತೆರಳಿ ನಡೆಸಲಾಗುತ್ತಿರುವ ಸಮೀಕ್ಷೆ ಪರಿಣಾಮಕಾರಿ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾದಿಂದ ಹಿರಿಯ ನಾಗರೀಕರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕ್ರಮಗಳ ಪೈಕಿ ಮನೆ ಮನೆಗಳಿಗೆ ತೆರಳಿ ನಡೆಸಲಾಗುತ್ತಿರುವ ಸಮೀಕ್ಷೆ ಪರಿಣಾಮಕಾರಿ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರಾಜ್ಯದ ಮೂಲೆ ಮೂಲೆಯಲ್ಲಿರುವ ಮನೆಗಳಲ್ಲಿ ಹಿರಿಯ ನಾಗರೀಕರ ಕುರಿತು ಮನೆ ಮನೆಗಳಿಗೆ ತೆರಳಿ ವರದಿ ಸಂಗ್ರಹಿಸಿದ್ದೇವೆ. ಸಮೀಕ್ಷಾ ವರದಿಯು ಕೊರೋನಾದಿಂದ ಹಿರಿಯ ನಾಗರೀಕರ ರಕ್ಷಣೆ ಮಾಡಲು ಸಹಾಯ ಮಾಡುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ. 

ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಸರ್ಕಾರ 1.5 ಕೋಟಿ ಮನೆಗಳಿಂದ ಮಾಹಿತಿ ಸಂಗ್ರಹಿಸಿದ್ದು, 60 ವರ್ಷಕ್ಕಿಂತಲೂ ಹೆಚ್ಚು ವಯಸ್ಸಿರುವವರ ಹಾಗೂ ವೈರಸ್ ಲಕ್ಷಣಗಳಿರುವ ಮನೆಗಳ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿದೆ. 

ಈ ದೂರವಾಣಿ ಸಂಖ್ಯೆಗಳಿಗೆ ಆಗಾಗ ಕರೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆಪ್ತಮಿತ್ರ ಸಾಫ್ಟ್ ವೇರ್ ಮೂಲಕ ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಇದಾದ ಬಳಿಕ ಆಶಾ ಕಾರ್ಯಕರ್ತೆಯರು ಸ್ಥಲಕ್ಕೆ ತೆರಳಿ ಫೀವರ್ ಕ್ಲಿನಿಕ್ ತೆರಳುವಂತೆ ನೋಡಿಕೊಳ್ಳಲಿದ್ದಾರೆ. ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯಗಳೂ ಇದೇ ವೇಳೆ ನಡೆಯಲಿದೆ ಎಂದು ತಿಳಿಸಿದ್ದಾರೆ. 

ಸರ್ಕಾರದ ನಡೆ ಉತ್ತಮವಾಗಿದೆ. ಇಂತಹ ಸಮೀಕ್ಷೆಗಳಿಂದ ಆಯಾ ಮನೆಗಳಲ್ಲಿರುವ ಯುವಕರು ವೃದ್ಧರ ಮೇಲೆ ಹೆಚ್ಚಿನ ಕಾಳಜಿವಹಿಸಲು ದಾರಿ ಮಾಡಿಕೊಡುತ್ತದೆ. ಹಿರಿಯ ವಯಸ್ಕರಲ್ಲಿಯೇ ವೈರಸ್ ನಿಂದ ಹೆಚ್ಚಿನ ಸೋಂಕು ಹಾಗೂ ಸಾವುಗಳು ಸಂಭವಿಸುತ್ತಿವೆ. ಈಗಾಗಲೇ ವಿದೇಶಗಳಲ್ಲಿ ಹಿರಿಯರನ್ನು ರಕ್ಷಣೆ ಮಾಡುವ ಹಲವು ಕಾರ್ಯಾಚರಣೆಗಳು ಆರಂಭವಾಗಿವೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com