ವಾಟ್ಸಪ್ ಸಂದೇಶ ನೋಡಿ ಕನ್ನಡ ಶಾಲೆ ಉಳಿವಿಗೆ ಆಗಮಿಸಿದ ಸಚಿವ ಸುರೇಶ್ ಕುಮಾರ್

ವಾಟ್ಸಪ್ ಸಂದೇಶ ನೋಡಿ ಶಾಲೆ ಉಳಿವಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶತಮಾನದ ಇತಿಹಾಸ ಇರುವ ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಶಾಲೆಗೆ ಇಂದು ಭೇಟಿ ನೀಡಿದರು.
ಸುರೇಶ್ ಕುಮಾರ್
ಸುರೇಶ್ ಕುಮಾರ್

ಹಾಸನ: ವಾಟ್ಸಪ್ ಸಂದೇಶ ನೋಡಿ ಶಾಲೆ ಉಳಿವಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶತಮಾನದ ಇತಿಹಾಸ ಇರುವ ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಶಾಲೆಗೆ ಇಂದು ಭೇಟಿ ನೀಡಿದರು.

ಗ್ರಾಮಸ್ಥರು ಹಾಗೂ ದಾನ ನೀಡಿದ‌ ಕುಟುಂಬದೊಂದಿಗೆ ಸಭೆ ನಡೆಸಿದ ಸಚಿವರು, ಶಾಲೆಯ ಹಿತದೃಷ್ಟಿಯಿಂದ ಶೀಘ್ರವೇ ನ್ಯಾಯ ಸಮ್ಮತ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದರು.
ಶಾಲಾ ಕಟ್ಟಡ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ‌ ಫೇಸ್ ಬುಕ್ ಅಭಿಯಾ‌ನವನ್ನು ಇತ್ತೀಚೆಗೆ ಸಚಿವರು ಫೇಸ್‌ಬುಕ್‌ ವೀಡಿಯೋ ನೋಡಿದ್ದರು. 

1911 ರಲ್ಲಿ ಗ್ರಾಮದ ಶಿವೇಗೌಡ ಅವರು ದಾನಕೊಟ್ಟಿದ್ದ ಸ್ಥಳದಲ್ಲಿ ಈ ಶಾಲೆ ನಿರ್ಮಿಸಲಾಗಿದ್ದು, 2008 ರಲ್ಲಿ ಹೊಸ ಕಟ್ಟಡ ಕಟ್ಟಿ ಶಾಲೆ ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರ ಬಳಿಕ ಈ ಕಟ್ಟಡ ಪಾಳುಬಿದ್ದಿತ್ತು. ಕಟ್ಟಡ ದುರಸ್ತಿ ಮಾಡಲು ಹಳೆ ವಿದ್ಯಾರ್ಥಿಗಳು ಮುಂದಾಗಿದ್ದರೂ ಈ ವೇಳೆ ಜಾಗ ದಾನ ಕೊಟ್ಟ ಶಿವೇಗೌಡರ‌ ಕುಟುಂಬಸ್ಥರು ಅದಕ್ಕೆ ಅಡ್ಡಿ ಪಡಿಸಿದ್ದರು. ದುರಸ್ತಿಗಾಗಿ ಮೇಲ್ಛಾವಣಿ ತೆಗೆದ ಬಳಿಕ ಕುಟುಂಬಸ್ಥರು ಅಡ್ಡಿ ಪಡಿಸಿದ್ದರು. ಆಗ ಶಾಲೆಯ ದುರಸ್ತಿಗೆ ಅವಕಾಶ ನೀಡಿ ಎಂದು ಗ್ರಾಮಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com