ಮಂಡ್ಯ: ಒಂದೇ ದಿನ 28 ಕೊರೋನಾ ಪಾಸಿಟಿವ್; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆ

ಕೊರೋನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದು,ಇಂದು ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ ೨೮ ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೩೭ಕ್ಕೆರೀದೆ.
ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್
ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್

ಮಂಡ್ಯ: ಕೊರೋನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದು,ಇಂದು ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ ೨೮ ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೩೭ಕ್ಕೆರೀದೆ.

ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಿಲ್ಲೆಯ ೨೩೭ ಮಂದಿ ಸೋಂಕಿತರ ಪೈಕಿ ೨೦೪ ಮಂದಿ ಮುಂಬೈನಿಂದ ಬಂದವರಾಗಿದ್ದು, ಇಂದಿನ ೨೮ ಮಂದಿ ಸೋಂಕಿತರ ಪೈಕಿ ೧೦ ಮಂದಿ ಪುರುಷರು, ೯ ಮಂದಿ ಮಹಿಳೆಯರು, ೨ ಮತ್ತು ೬ ವರ್ಷದ ಇಬ್ಬರು ಮಕ್ಕಳು, ೧೧ ರಿಂದ ೧೩ ವರ್ಷದ ೩ ಬಾಲಕರು ಹಾಗೂ ೧೫ ರಿಂ ೧೭ ವರ್ಷದ ೪ ಮಂದಿ ಬಾಲಕಿಯರು ಸೇರಿದ್ದಾರೆಂದು ಹೇಳಿದರು.

 ಪಿ. ೧೭೯೬ ರಿಂದ ಪಿ. ೧೮೦೭ ರವರೆಗಿನ ೧೨ ಮಂದಿ ಹಾಗೂ ಪಿ. ೧೯೧೪ ರಿಂದ ಪಿ. ೧೯೨೯ ರ ವರೆಗಿನ ೧೬ ಮಂದಿಗೆ ಸೋಂಕು ದೃಢಪಟ್ಟಿದೆ ಇವರೆಲ್ಲಾ ಕೆ.ಆರ್ ಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.ಇವರೆಲ್ಲಾ ಮುಂಬೈನ ಅಂಧೇರಿ, ನೆಹರು ನಗರ, ಕಿಸಾನ್ ನಗರ, ಅನುಮಾನ್ ಡಿಗ್ರಿ ಮುಂಬೈ, ಇಂದಿರಾ ನಗರ, ಚೆರಿಮಿರ್ಲೆ, ಸಾಂತಾಕ್ರೋಸ್, ಬಾದಲ್ ನಗರ ಸೇರಿದಂತೆ ವಿವಿಧೆಡೆ ವಾಸವಾಗಿದ್ದವರಾಗಿದ್ದಾರೆ. ಇಬ್ಬರು ಗಂಡಸರು ಹೋಟೆಲ್ ನಲ್ಲಿ ಸಹಾಯಕರಾಗಿ, ಬಾರ್ ಮತ್ತು ವೈನ್ ಸ್ಟೋರ್ ಗಳಲ್ಲಿ, ಚಾಲಕರಾಗಿ  ಉದ್ಯೋಗ ಮಾಡಿಕೊಂಡಿದ್ದು, ಮಹಿಳೆಯರು ಗೃಹಿಣಿಯರಾಗಿದ್ದಾರೆ.ಬಾಲಕ ಬಾಲಕಿಯರು ವಿದ್ಯಾರ್ಥಿಗಳಾಗಿದ್ದಾರೆಂದು ಅವರು ಹೇಳಿದರು.

ಇವರೆಲ್ಲಾ ಮೇ, ೧೩, ೧೪, ೧೫, ೧೬ರ ವಿವಿಧ ದಿನಾಂಕಗಳಂದು ಮುಂಬೈನಿಂದ ಬೆಳಗಾಂನ ನಿಪ್ಪಾಣಿ ಚೆಕ್ ಪೋಸ್ಟ್ ಮೂಲಕ ಧಾರವಾಡ, ಹಾವೇರಿ, ದಾವಣಗೆರೆ ಮೂಲಕ  ಕ್ರಮವಾಗಿ ಮೇ ೧೭ ಮತ್ತು ೧೮ ರಂದು ಆನಗೋಳ ಚೆಕ್ ಪೋಸ್ಟ್ ಗೆ ಆಗಮಿಸಿದ್ದು, ಇವರನ್ನ ಅಂದೇ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು.ಇಂದು ಬಂದ ವರದಿಯಲ್ಲಿ ೨೮ ಮಂದಿಗೂ ಪಾಸಿಟಿವ್ ಫಲಿತಾಂಶ ಬಂದಿದೆ ಎಂದರು.

೨೮ ಮಂದಿಯನ್ನು ಮಂಡ್ಯ ಜಿಲ್ಲಾಸ್ಪಾತ್ರೆಯ ಐಸೋಲೇಷನ್ ಗೆ ದಾಖಲು ಮಾಡಲಾಗಿದ್ದು, ಇವರೆಲ್ಲಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ಇವರ ಪ್ರಥಮ ಸಂಪರ್ಕಿತ ಹಲವರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತಬ್ಲಿಘಿ ನಂಟಿನಿಂದ ಬಂದ ಪ್ರಕರಣಗಳು ಶೇ. ೯೯ ರಷ್ಟು ಹತೋಟಿಗೆ ಬಂದಿದ್ದು, ಮಳವಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ನನ್ನು ತೆರವುಗೊಳಿಸಲಾಗಿದೆ.ನಂಜನಗೂಡು ಜುಬಿಲಿಯಿಟಿ ಕಾರ್ಖಾನೆಯ ನಂಟಿನ ಮಂಡ್ಯ ನಗರದ ಇಬ್ಬರು ಸೊಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.ಮುಂಬೈನಿಂದ ಹೆಚ್ಚು ಮಂದಿ ವಲಸಿಗರು ಜಿಲ್ಲೆಗೆ ಬರುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು.

ನುಸುಳು ಕೋರರ ಬಗ್ಗೆ ಮಾಹಿತಿ ನೀಡಿ: ಮುಂಬೈ ನಂಟಿನಿಂದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮಂಡ್ಯ ನಗರದಲ್ಲಿ ೯೫೦ ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಚೆನೈ, ಆಹಮದಾಬಾದ್ ಹಾಗೂ ಮುಂಬೈನಿಂದನುಸುಳಿ ಬರುತ್ತಿರುವುದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಈ ಸಂಬಂಧ ಯಬೆಳಗಾಂ ಚೆಕ್ ಪೋಸ್ಟ್ ಗೂ ಸಹ ಮಾಹಿತಿ ರವಾನಿಸಲಾಗಿದೆ ಮುಂಬೈನಿಂದ ಬರುತ್ತಿರುವ ಎಲ್ಲಾರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಇಲ್ಲಿಯವರೆಗೆ ೨೬ ಮಂದಿ ಗುಣಮುಖ: ಇಂದು ಪಿ. ೮೬೯ ಸಂಖ್ಯೆಯ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಇಲ್ಲಿಯವರೆಗೆ ೨೬ ಮಂದಿ ಬಿಡುಗಡೆಯಾಗಿದ್ದಾರೆ. ಮುಂಬೈನಿಂದ ಬರುತ್ತಿರುವವರಿಗೆ  ಚೆಕ್ಪೋಸ್ಟ್ ನಲ್ಲೇ ತಡೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪಾಸಿಟಿವ್ ಬಂದವರನ್ನು ಮೀಮ್ಸ್ ಗೆ ದಾಖಲು ಮಾಡಲಾಗುತ್ತಿದ್ದು, ನೆಗೆಟಿವ್ ಬಂದವರನ್ನು ೧೪ ದಿನ ಕ್ವಾರಂಟೈನ್ ಮಾಡಿ ಮತ್ತೆ ೧೪ ದಿನಗಳ ನಂತರ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುವುದೆಂದು ಅವರು ಹೇಳಿದರು.

ಕೊರೋನಾ ವಾರಿರ್ಸ್ ಗೆ ಕಿರುಕುಳ ಬೇಡ: ಕ್ವಾರಂಟೈನ್ ನಲ್ಲಿ ಇರುವವರು ಸಿಗುತ್ತಿರುವ ಅಗತ್ಯ ಮೂಲಭೂತ ಸೌಲಭ್ಯ ಮತ್ತು ಸೌಕರ್ಯಗಳನ್ನು ಬಳಸಿಕೊಳ್ಳಬೇಕು ಕೆಲವರು ಅನಗತ್ಯವಾಗಿ, ಉದ್ದೇಶ ಪೂರ್ವಕವಾಗಿ ಅಲ್ಲಿನ ವೈದ್ಯರು, ಪೋಲಿಸರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಬಿಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಈ ರೀತಿ ಮಾಡದೇ ವಾರಿಯರ್ಸ್ ಗಳ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಮಾಡಬೇಕೆಂದು ಅವರು ಹೇಳಿದರು.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com