ಏಕಕಾಲಕ್ಕೆ ಎರಡು ಪದವಿ ಪಡೆಯಲು ಯುಜಿಸಿ ಒಪ್ಪಿಗೆ

ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶ ದೊರೆತಿದ್ದು, ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಪಿ) ಒಪ್ಪಿಗೆ ನೀಡಿದೆ. 

Published: 23rd May 2020 09:37 AM  |   Last Updated: 23rd May 2020 09:37 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶ ದೊರೆತಿದ್ದು, ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಪಿ) ಒಪ್ಪಿಗೆ ನೀಡಿದೆ. 

ವಿದ್ಯಾರ್ಥಿಗಳು ಒಂದು ಪದವಿಯನ್ನು ರೆಗ್ಯುಲರ್ ಆಗಿ ಹಾಗೂ ಮತ್ತೊಂದು ಪದವಿಯನ್ನು ಆನ್'ಲೈನ್ ದೂರಶಿಕ್ಷಣದ ಮೂಲಕ ಪಡೆಯಬಹುದಾಗಿದೆ ಎಂದು ಯುಜಿಪಿ ಉಪಾಧ್ಯಕ್ಷ ಭೂಷಣ್ ಪಟ್ವರ್ಧನ್ ಅವರು ತಿಳಿಸಿದ್ದಾರೆ.

ಈ ವಿಚಾರದ ಸಂಬಂಧ ನಿರ್ಧಾರ ಕೈಗೊಳ್ಳಲು ಕಳೆದ ವರ್ಷ ಯುಜಿಪಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಒಂದೇ ವಿಭಾಗದ ಅಥವಾ ಬೇರೆ ವಿಭಾಗದ ವಿಷಯಗಳನ್ನು ಏಕಕಾಲಕ್ಕೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಮಿತಿ ತಿಳಿಸಿದೆ. 

ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಆಚೋಗದ ಇತ್ತೀಚಿನ ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಯುಜಿಪಿ ಕಾರ್ಯದರ್ಶಿ ರಜನೀಶ್ ಜೈನ್ ಅವರು ತಿಳಿಸಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp