ಹಾಸನದಲ್ಲಿ ಪೊಲೀಸ್ ಪೇದೆಯಲ್ಲಿ ವೈರಸ್ ದೃಢ: 2 ಏರಿಯಾಗಳು ಸೀಲ್'ಡೌನ್, ಕ್ವಾರಂಟೈನ್'ನಲ್ಲಿ 100ಕ್ಕೂ ಹೆಚ್ಚು ಪೊಲೀಸರು

ಪೊಲೀಸ್ ಪೇದೆಯೊಬ್ಬರಲ್ಲಿ ಮಹಾಮಾರಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಎರಡು ಏರಿಯಾಗಳನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

Published: 24th May 2020 01:39 PM  |   Last Updated: 24th May 2020 01:39 PM   |  A+A-


Indiranagar #Hassan  city as continement zones following Two positive cases reported on Sunday

ಹಾಸನದ ಇಂದಿರಾನಗರ ಸೀಲ್'ಡೌನ್

Posted By : manjula
Source : Online Desk

ಹಾಸನ: ಪೊಲೀಸ್ ಪೇದೆಯೊಬ್ಬರಲ್ಲಿ ಮಹಾಮಾರಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಎರಡು ಏರಿಯಾಗಳನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪೊಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಈ ವರೆಗೂ ಹಾಸದಲ್ಲಿ 14 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. 

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಕೊರೋನಾ ದೃಢಪಟ್ಟಿರುವ ಪೊಲೀಸ್ ಪೇದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ಹಾಸನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೂ ಇವರು ಭೇಟಿ ನೀಡಿದ್ದು, ಇದೀಗ ನೂರಕ್ಕೂ ಹೆಚ್ಚು ಪೊಲೀಸರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು ಎರಡು ಏರಿಯಾಗಳನ್ನು ಕಂಟೈನ್'ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಇಂದಿನಿಂದ 28 ದಿನಗಳ ಕಾಲ ಈ ರಸ್ತೆಗಳನ್ನು ಸೀಲ್'ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಬಹಳ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp