ಶಿರಸಿ: ಕೊರೋನಾ ಬರದಂತೆ ತಡೆಯಲು ಕಷಾಯ ಕುಡಿದ ಮಗ ಸಾವು; ಅಪ್ಪನ ಸ್ಥಿತಿ ಗಂಭೀರ

ಕೊರೋನಾ ಬರದಂತೆ ತಡೆಯಲು ಕಾಸರಕ ಚಕ್ಕೆ ಅರೆದು ತಿಂದ ಅಪ್ಪ-ಮಗ, ಕೊನೆಗೆ ಮಗ ಕೊನೆಯುಸಿರೆಳೆದರೆ, ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿರಸಿ: ಕೊರೋನಾ ಬರದಂತೆ ತಡೆಯಲು ಕಾಸರಕ ಚಕ್ಕೆ ಅರೆದು ತಿಂದ ಅಪ್ಪ-ಮಗ, ಕೊನೆಗೆ ಮಗ ಕೊನೆಯುಸಿರೆಳೆದರೆ, ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದೆ. 

ಉತ್ತರಕನ್ನಡ ಜಿಲ್ಲೆಯ ಶಿರಸಿಯ ರಾಮನಬೈಲ್‌ನಲ್ಲಿ ಘಟನೆ ನಡೆದಿದ್ದು, ಕರೋನಾ ಬರಬಾರದು ಎಂದರೆ ಗಿಡಮೂಲಿಕೆ ಕಷಾಯ ಮಾಡಿ ಕುಡಿಯಬೇಕು ಎಂದು ಯಾರೋ ಹೇಳಿದರು ಎಂದು ಮಾಡಲು ಹೋಗಿ ಬೆಲೆ ತೆತ್ತಿದ್ದಾರೆ. 

ಪ್ರಾನ್ಸಿಸ್ ರೇಗೊ(42) ಕೊನೆಯುಸಿರೆಳೆದಿದ್ದರೆ, 70 ವರ್ಷದ ನೆಕ್ಲಾಂ ಅಂಥೋನಿ ತೀವ್ರ ಅಸ್ವಸ್ಥರಾಗಿದ್ದಾರೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಅವರಿಬ್ಬರೂ ಯಾವುದೋ‌ ಬೇರಿನ ಕಷಾಯ ಕುಡಿದಿದ್ದರು' ಎಂದು ಸಂಬಂಧಿಕರು ತಿಳಿಸಿದ್ದಾರೆ.

ಅವರ ಕಷಾಯಕ್ಕೆ ಬಳಸಿರುವ ಬೇರನ್ನು ಸಂಗ್ರಹಿಸಿ ತಂದಿದ್ದು, ಅದು ಯಾವ ಜಾತಿಯ ಬೇರು ಎಂದು ಇನ್ನಷ್ಟೇ  ಗೊತ್ತಾಗಬೇಕಾಗಿದೆ ಎಂದು ಸಿಪಿಐ ಪ್ರದೀಪ್ ತಿಳಿಸಿದ್ದಾರೆ, ಹಳ್ಳಿ ಔಷಧ ಅಂತ ಏನನ್ನಾದರೂ ಕುಡಿಯಲು ಹೋದರೆ ಸಾವು ಬರುತ್ತೆ ಅನ್ನುವುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com