ದೆಹಲಿಯಿಂದ ಖರೀದಿಸಿದ್ದ 15 ವೆಂಟಿಲೇಟರ್ ಕಳಪೆ ಗುಣಮಟ್ಟದ್ದು: ವಾಪಸ್ ನೀಡಲು ಸರ್ಕಾರ ಚಿಂತನೆ

ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾದಿ ದೆಹಲಿಯಿಂದ ಖರೀದಿ ಮಾಡಿದ್ದ 15 ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅವುಗಳನ್ನು ವಾಪಸ್ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾದಿ ದೆಹಲಿಯಿಂದ ಖರೀದಿ ಮಾಡಿದ್ದ 15 ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅವುಗಳನ್ನು ವಾಪಸ್ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. 

ರಾಜ್ಯ ಡ್ರಗ್ ಲಾಜಿಸ್ಟಿಕ್ಸ್ ಆ್ಯಂಪ್ ವೇರ್ ಹೌಸಿಂಗ್ ಸೊಸೈಟಿಯು ದೆಹಲಿಯ ಆರ್.ಕೆ.ಮೆಡಿಕಲ್ ಸಲ್ಯೂಶಸ್ಸ್ ಕಂಪನಿಯಿಂದ 15 ವೆಂಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. 

ಅದರಂತೆ ಕಂಪನಿಯು ಏ.14 ರಂದು ಡ್ರ್ಯಾಗರ್ ಹೆಸರಿನ 15 ವೆಂಟಿಲೇಟರ್ ಗಳನ್ನು ಸರಬರಾಜು ಮಾಡಿತ್ತು. ಬಳಿಯ ವೆಂಟಿಲೇಟರ್ ಗಳನ್ನು ಪರಿಶೀಲಿಸಲು ತಂತ್ರಜ್ಞರನ್ನು ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರ ಕಂಪನಿಗೆ ಪತ್ರ ಬರೆದು ತಿಳಿಸಿತ್ತು. ಆದರೆ, ಇದಕ್ಕೆ ಕಂಪನಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ.
 
ಬಳಿಕ ಸೊಸೈಟಿಯ ತಜ್ಞರಿಂದಲೇ ಗುಣಮಟ್ಟವನ್ನು ಪರೀಕ್ಷೆ ಮಾಡಿಸಲಾಗಿದ್ದು, ಈ ವೇಳೆ ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದ್ದು ಎಂಬುದು ಬಹಿರಂಗಗೊಂಡಿದೆ. ಬಳಿಕ ಏ.28ರಂದೇ ಸೊಸೈಟಿಯ ಹೆಚ್ಚುವರಿ ನಿರ್ದೇಶಕರು ಕಂಪನಿಗೆ ನೋಟಿಸ್ ನೀಡಿದ್ದು, ವೆಂಟಿಲೇಟರ್ ಗಳಲ್ಲಿ ಕಂಡು ಬಂದಿರುವ ದೋಷಗಳನ್ನು ಪಟ್ಟಿ ಮಾಡಿ ತಿಳಿಸಿದೆ. 

ಎಲ್ಲಾ ವೆಂಟಿಲೇಟರ್ ಗಳನ್ನು ಕಂಪನಿಯು ತನ್ನ ಖರ್ಚಿನಲ್ಲಿಯೇ ಕೊಂಡೊಯ್ಯಬೇಕೆಂದು ನೋಟಿಸ್ ನಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com