ಬೆಂಗಳೂರು: ಲಾಕ್ ಡೌನ್ ಮುಗಿಸಿ ವಾಪಸ್ಸಾದ 600 ವಲಸೆ ಕಾರ್ಮಿಕರಿಗೆ ದೊಡ್ಡ ಶಾಕ್, ಗುಡಿಸಲು ಸುಟ್ಟು ಭಸ್ಮ!

ಬೆಂಗಳೂರಿನ ಲಿಂಗರಾಜಪುರಂನ ಕಚಕರನಹಳ್ಳಿಯ ಸಂಡೆ ಬಜಾರ್ ಬಳಿ ಕಲಬುರಗಿಯ ಸುಮಾರು 600 ಹೆಚ್ಚು ವಲಸೆ ಕಾರ್ಮಿಕರು ಕಳೆದ 20 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸವಾಗಿದ್ದರು. ಆದರೆ ಕೆಲಸ ದುಷ್ಕರ್ಮಿಗಳು ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಲಿಂಗರಾಜಪುರಂನ ಕಚಕರನಹಳ್ಳಿಯ ಸಂಡೆ ಬಜಾರ್ ಬಳಿ ಕಲಬುರಗಿಯ ಸುಮಾರು 600 ಹೆಚ್ಚು ವಲಸೆ ಕಾರ್ಮಿಕರು ಕಳೆದ 20 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸವಾಗಿದ್ದರು. ಆದರೆ ಕೆಲಸ ದುಷ್ಕರ್ಮಿಗಳು ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. 

“ಕಲಬುರಗಿಯಿಂದ ಸುಮಾರು 600 ವಲಸಿಗರು ಕಳೆದ 20 ವರ್ಷಗಳಿಂದ ಕಚರಕನಹಳ್ಳಿಯ ದೇವಾಲಯ ಸಂಕೀರ್ಣದ ಬಳಿಯ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು. ತಮ್ಮ ಊರಿನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಲಸೆ ಕಾರ್ಮಿಕರು ಕಲಬುರಗಿಗೆ ತೆರಳಿದ್ದರು. ನಂತರ ದೇಶದಲ್ಲಿ ಕೊರೋನಾ ಸಂಬಂಧ ಲಾಕ್ ಡೌನ್ ಘೋಷಿಸಿದ್ದರಿಂದ ಅವರೆಲ್ಲಾ ಅಲ್ಲೆ ಉಳಿಯುವಂತಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆಯಿಂದಾಗಿ ಬೆಂಗಳೂರಿಗೆ ವಾಸಸ್ಸಾಗಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಗುಡಿಸಲುಗಳು ಸುಟ್ಟು ಹೋಗಿರುವುದನ್ನು ಕಂಡು ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. 

ಏಪ್ರಿಲ್ 27ರಂದು ಸುಮಾರು 130 ಗುಡಿಸಲುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಎಂದು ಉಚಿತ ಪಡಿತರವನ್ನು ವಿತರಿಸಲು ಹೋಗಿದ್ದ ಸಮಾಜ ಸೇವಕರೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ಖಾಲಿ ಗುಡಿಸಲುಗಳಿಗೆ ಕೆಲವರು ಬಂದು ಬೆಂಕಿ ಹಚ್ಚಿದರು. ನಾವು ಅವರನ್ನು ತಡೆಯಲು ಪ್ರಯತ್ನಿಸಿದ್ದು ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. “ನಾವು ಕೂಡಲೇ ವಲಸೆ ಕಾರ್ಮಿಕರನ್ನು ಸಂಪರ್ಕಿಸಿ ಇಲ್ಲಿಗೆ ಬರುವಂತೆ ಹೇಳಿದೇವು. ಆದರೆ ಲಾಕ್ ಡೌನ್ ಘೋಷಿಸಿದ್ದರಿಂದ ಅವರು ಬರಲು ಸಾಧ್ಯವಾಗಲಿಲ್ಲ  ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು. 

ಲಾಕ್ ಡೌನ್ ಸಡಿಲಿಕೆ ನಂತರ, ಅವರಲ್ಲಿ ಕೆಲವರು ಮತ್ತೆ ಬೆಂಗಳೂರಿಗೆ ಧಾವಿಸಿದ್ದು ತಮ್ಮ ಗುಡಿಸಲುಗಳು ಸುಟ್ಟು ಹೋಗಿರುವುದನ್ನು ನೋಡಿ ಕಂಗಲಾದರು. ನಮಗೆ ಏನೂ ಉಳಿದಿಲ್ಲ. ಇದು ಅನ್ಯಾಯದ ಜಗತ್ತು ವಲಸೆ ಕಾರ್ಮಿಕರು ಗೋಳಾಡುತ್ತಿದ್ದಾರೆ.

ವಲಸೆ ಕಾರ್ಮಿಕರ ಸುಮಾರು 50 ಶಾಲಾ ಮಕ್ಕಳು ತಮ್ಮ ಪುಸ್ತಕಗಳನ್ನು ಕಳೆದುಕೊಂಡಿದ್ದಾರೆ. ಇವರ ಪೈಕಿ ಮೂವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದು, ಅವರ ಪರೀಕ್ಷೆಗಳು ಬರಲಿವೆ. ಅವರ ಭವಿಷ್ಯವು ಹೆಚ್ಚು ಅನಿಶ್ಚಿತವಾಗಿ ಕಾಣುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ(ಕೆಎಸ್‌ಸಿಪಿಸಿಆರ್) ಅಧ್ಯಕ್ಷ ಆಂಟನಿ ಸೆಬಾಸ್ಟಿಯನ್ ಅವರು ಸ್ಥಳಕ್ಕೆ ಭೇಟಿ ನೀಡಿ ವಲಸೆ ಕಾರ್ಮಿಕರೊಂದಿಗೆ ಮಾತನಾಡಿದರು.

ಏತನ್ಮಧ್ಯೆ, ಡಾ ಸೆಬಾಸ್ಟಿಯನ್ ಅವರು ವಿದ್ಯಾರ್ಥಿಗಳ ಬಗ್ಗೆ ಬ್ಲಾಕ್ ಶಿಕ್ಷಣ ಅಧಿಕಾರಿ(ಬಿಇಒ) ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಅವರನ್ನು ಸಂಪರ್ಕಿಸಿ ವಿದ್ಯಾರ್ಥಿಗಳು ಅನುಭವಿಸಿದ ತೊಂದರೆಯನ್ನು ವಿವರಿಸಿದ್ದು ಮುಂಬರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಅಧ್ಯಯನ ಸಾಮಗ್ರಿಗಳನ್ನು ನೀಡುವಂತೆ ಕೋರಿದ್ದು ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಕೆಎಸ್ಸಿಪಿಸಿಆರ್ ಅಧ್ಯಕ್ಷರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com