ಗ್ರೀನ್ ಝೋನ್ ರಾಮನಗರಕ್ಕೂ ವಕ್ಕರಿಸಿದ ಕೊರೋನಾ; ರಾಜ್ಯದಲ್ಲಿ 69 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಸೋಮವಾರ ಮತ್ತೆ 69 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಗ್ರೀನ್ ಝೋನ್ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಸೋಮವಾರ ಮತ್ತೆ 69 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಗ್ರೀನ್ ಝೋನ್ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. 

ಉಡುಪಿಯಲ್ಲಿ 16, ಯಾದಗಿರಿಯಲ್ಲಿ 15, ಕಲಬುರಗಿಯಲ್ಲಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 6, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿ 3 ಪ್ರಕರಣಗಳು ದೃಢಪಟ್ಟಿದೆ. 

ಈ ನಡುವೆ ಗ್ರೀನ್ ಝೋನ್ ಪಟ್ಟಿಯಲ್ಲಿದ್ದ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಮೊದಲ ಸೋಂಕು ಪ್ರಕರಣ ಸೋಮವಾರ ಪತ್ತೆಯಾಗಿದೆ. 

ಚೆನ್ನೈ ನಗರದಿಂದ ಬಂದಿದ್ದ ಮಗುವಿನಲ್ಲಿ ಕೊರೊನಾ ಪತ್ತೆಯಾಗಿದೆ. ಕಳೆದ ವಾರ ದಂಪತಿಗಳೊಂದಿಗೆ ಮಗು ಚೆನ್ನೈನಿಂದ ರಾಮನಗರದ ಮಾಗಡಿ ತಾಲೂಕಿನ ಗ್ರಾಮವೊಂದಕ್ಕೆ ಬಂದಿದ್ದತ್ತು ಎಂದು ಹೇಳಲಾಗುತ್ತಿದೆ. 

ಈ ನಡುವೆ 2,158 ಮಂದಿ ಸೋಂಕಿತರ ಪೈಕಿ ಈ ವರೆಗೂ 680 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ 1,433 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಹಾಮಾರಿ ವೈರಸ್'ಗೆ ಬೆಂಗಳೂರು ಗ್ರಾಮಾಂತರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದರಂತೆ ಈ ವರೆಗೂ ಹೆಮ್ಮಾರಿ ವೈರಸ್'ಗೆ ರಾಜ್ಯದಲ್ಲಿ 43 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com