ನೈಋತ್ಯ ರೈಲ್ವೇಯಲ್ಲಿ ಇದೇ ಮೊದಲು: ಚಲಿಸುವ ರೈಲಿನಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರು

ನೈಋತ್ಯ ವಿಭಾಗದ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಇಬ್ಬರು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಭಾನುವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೈಋತ್ಯ ವಿಭಾಗದ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಇಬ್ಬರು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಭಾನುವಾರ ನಡೆದಿದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲುಕಿರುವ ಹೊರರಾಜ್ಯದ ಕಾರ್ಮಿಕರನ್ನು ಅವರ ತವರೂರಿಗೆ ಕಳುಹಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನೈಋತ್ಯ ರೈಲ್ವೆ ಸಿಬ್ಬಂದಿ, ಮಾರ್ಗಮಧ್ಯದಲ್ಲಿ ಗರ್ಭಿಣಿಯೋರ್ವರ ಪ್ರಸವ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದ ರೈಲಿನಲ್ಲಿದ್ದ ಗರ್ಭಿಣಿಗೆ ನ್ಯೂ ಡೆಲ್ಲಿ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರಿಗೆ ರೈಲ್ವೆ ಸಿಬ್ಬಂದಿಯಾದ ಎಸ್. ರವಿ, ರವಿ ರಂಜನ್ ಕುಮಾರ್ ಮತ್ತು ಪಂಕಜ್ ಜಾ ಅವರು ಇತರ ಪ್ರಯಾಣಿಕರ ನೆರವಿನೊಂದಿಗೆ ಸುರಕ್ಷಿತ ಪ್ರಸವಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಈ ಮಹಿಳೆ ಆರೋಗ್ಯಪೂರ್ಣ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಇದರಂತೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟಿದ್ದ ಬೆಂಗಲೂರು ದೆಹಲಿ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ಗರ್ಭಿಣಿಗೆ ಭಾನುವಾರ ಬೆಳಗಿನ ಜಾವ 5.30ರ ಸುಮಾರಿಗೆ ಆಗ್ರಾ ಬಳಿ ರೈಲು ಹೋಗುವಾಗ ಪ್ರಸವವೇದನೆ ಆರಂಭವಾಗಿದೆ. ಈ ವೇಳೆ ರೈಲಿನಲ್ಲಿ ಟಿಕೆಟ್ ಪರಿವೀಕ್ಷಕರಾದ ಎಸ್.ರವಿ ರಾಜನ್ ಕುಮಾರ್ ಹಾಗೂ ಪಂಕಜ್ ಜಾ ಅವರು ಸಹ ಪ್ರಯಾಣಿಕರ ನೆರವಿನಿಂದ ಮಹಿಳೆಗೆ ಯಶಸ್ವಿಯಾಗಿ ಹೆರಿಗೆಯಾಗಿದೆ. 

ಹಿರಿಗೆ ನೋವು ಆರಂಬವಾದರೂ ಈ ಮಹಿಳೆ ಕೊರೋನಾ ಭಯದಿಂದ ಚಿಕಿತ್ಸೆಗೆ ಹೆದರಿದ್ದರು. ಇದೇ ರೈಲಿನಲ್ಲಿ ಸಹ ಪ್ರಯಾಣಿಕರಾಗಿದ್ದ ವೃದ್ಧೆಯೊಬ್ಬರು ಮಥುರಾ ಬಳಿ ಆಕೆಗೆ ಧೈರ್ಯ ತುಂಬಿ ರೈಲು ದೆಹಲಿ ರೈಲು ನಿಲ್ದಾಣ ತಲುಪವ ವೇಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಮಹಿಳೆ ಹಾಗೂ ಆಕೆ ಮಗು ಆರೋಗ್ಯವಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಭಾನುವಾರ ರಾಜ್ಯದ ವಿವಿಧೆಡೆಯಿಂದ 12 ಶ್ರಮಿಕ್ ರೈಲುಗಳು ಪ್ರಯಾಣ ಬೆಳೆಸಿವೆ. ಭಾನುವಾರ ನಸುಕಿನ 1.45ರ ಸುಮಾರಿಗೆ ಒಂದು ರೈಲು ಕುರ್ದಾ ರಸ್ತೆಗೆ ಸಂಚಾರ ಆರಂಭಿಸಿತ್ತು. ಉಳಿದಂತೆ ಬೆಂಗಳೂರಿನಿಂದ ದರ್ಬಾಂಗ (ಬಿಹಾರ), ಅರರಿಯಾ (ಬಿಹಾರ) ಮುಜಾಫರ್ ನಗರ (ಬಿಹಾರ), ಬರೌನಿ (ಬಿಹಾರ), ಗೋರಕ್ ಪುರ (ಉತ್ತರಪ್ರದೇಶ), ಕಟಿಹಾರ್ (ಬಿಹಾರ), ಗೋರಕ್ ಪುರ (ಉತ್ತರಪ್ರದೇಶ) ಹೊಸೂರಿಂದ ಬಾಗಲಪುರ (ಬಿಹಾರ), ಬೆಂಗಳೂರು ನಗರದಿಂದ ಭದ್ರಕ್ (ಒಡಿಶಾ)ಗೆ ಎರಡು ರೈಲು ಪ್ರಯಾಣ ಬೆಳೆಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com