ಎರವಲು ಹಿರಿಯ ಅಧಿಕಾರಿಗಳು ಮರಳಿ ಮಾತೃ ಇಲಾಖೆಗೆ ಬನ್ನಿ: ಸಹಕಾರ ಸಚಿವ ಸೋಮಶೇಖರ್

ವಿವಿಧ ಇಲಾಖೆಗಳಲ್ಲಿ ಎರವಲು ಸೇವೆಯಮೇಲೆ ಕೆಲಸ ಮಾಡುತ್ತಿರುವವರು ಮಾತೃ ಇಲಾಖೆಗೆ ಹಿಂದಿರುಗಲು ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮಶೇಖರ್
ಸೋಮಶೇಖರ್

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಎರವಲು ಸೇವೆಯಮೇಲೆ ಕೆಲಸ ಮಾಡುತ್ತಿರುವವರು ಮಾತೃ ಇಲಾಖೆಗೆ ಹಿಂದಿರುಗಲು ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. 

ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯಿಂದ ಉಪ ನಿಬಂಧಕರು, ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿಬಂಧಕರು, ಅಪರ ನಿರ್ದೇಶಕರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಹೀಗೆ ಹಲವಾರು ವರ್ಷಗಳಿಂದ ಇನ್ನಿತರ ಇಲಾಖೆಯಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದು, ಇಂತಹವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದುರುವಂಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಹಲವು ಅಧಿಕಾರಿಗಳು ಸಹಕಾರ ಇಲಾಖೆಯಲ್ಲಿ ಹುದ್ದೆಗೆ ಸೇರಿದ ಅಧಿಕಾರಿಗಳು ಬಳಿಕ ಲಾಭದಾಯಕ ಇಲಾಖೆಗಳಿಗೆ ಡೆಪ್ಯುಟೇಷನ್ ಮೇಲೆ ತೆರಳುತ್ತಿದ್ದರು. ಇದರಿಂದಾಗಿ ಸಹಕಾರ ಇಲಾಖೆಯಲ್ಲಿ ಅಧಿಕಾರಿಗಳು ಲೆಕ್ಕಕ್ಕ ಮಾತ್ರ ಸಿಗುತ್ತಿದ್ದರೂ ಆದರೆ ಕೆಲಸಕ್ಕೆ ಮಾತ್ರ ಸಿಬ್ಬಂದಿಗಳಿ ಸಿಗುತ್ತಿರಲಿಲ್ಲ. 

ಈ ಮೊದಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಗೆಂದು ನೇಮಕ ಮಾಡಿಕೊಳ್ಳಲಾ ಗಿದ್ದರೂ, ಇಲ್ಲಿ ಹೆಚ್ಚಿನ ಕೆಲಸದ ಒತ್ತಡಗಳಿಲ್ಲದ ಕಾರಣ, ಬೇರೆ ಬೇರೆ ಇಲಾಖೆಗಳಿಗೆ ಹಲವರು ಡೆಪ್ಯೂಟ್ ಆದವರೋ ಇಲ್ಲವೇ ಒಒಡಿ ಮೇಲೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಇಲಾಖೆಯಲ್ಲಿ ಕಡತ ವಿಲೇ ವಾರಿ ಸೇರಿದಂತೆ ಕಾರ್ಯಕ್ರಮಅನುಷ್ಟಾನ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಇಲಾಖಾ ಪರಿಶೀಲನೆ ವೇಳೆ ಸಚಿವರಿಗೆ ಮನದಟ್ಟಾಗಿದೆ.

ಹೀಗಾಗಿ ಅವರನ್ನು ಪುನಃ ಸಹಕಾರ ಇಲಾಖೆಗೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಚಿವರು ಚಾಲನೆ ನೀಡಿದ್ದಾರೆ. ಈ ವಿಚಾರವಾಗಿ ಕಳೆದ ವಾರ ಸೋಮಶೇಖರ್, ಸಿಎಂ ಗಮನಕ್ಕೆ ತಂದಿದ್ದರು, ಮುಖ್ಯಮಂತ್ರಿಗಳೂ ಕೂಡ ಕೂಡಲೇ ಕ್ರಮಕ್ಕೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com