ಹಾಸನ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕಾಮಗಾರಿಗೆ ಪ್ರೀತಂ ಗೌಡ ಚಾಲನೆ

ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸನ‌ ನಗರವನ್ನು ಹೊರ ವಲಯದೊಂದಿಗೆ ಸಂಪರ್ಕಿಸುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಪ್ರೀತಂ ಗೌಡ ಅವರು ಇಂದು ಚಾಲನೆ‌‌ ನೀಡಿದ್ದಾರೆ.

Published: 25th May 2020 02:25 PM  |   Last Updated: 25th May 2020 02:25 PM   |  A+A-


Preetham gowda

ಪ್ರೀತಂ ಗೌಡ

Posted By : Shilpa D
Source : UNI

ಹಾಸನ: ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸನ‌ ನಗರವನ್ನು ಹೊರ ವಲಯದೊಂದಿಗೆ ಸಂಪರ್ಕಿಸುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಪ್ರೀತಂ ಗೌಡ ಅವರು ಇಂದು ಚಾಲನೆ‌‌ ನೀಡಿದ್ದಾರೆ.

ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಗೊರೂರು ರಸ್ತೆಗೆ ಹೊಂದಿಕೊಂಡಿರುವ ದೇವೇಗೌಡ ನಗರ ಮಾರ್ಗವಾಗಿ ಕೃಷ್ಣಾನಗರ ತಲುಪುವ ರಸ್ತೆ ಹಾಗೂ 2 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಘಟ್ಟದಿಂದ ಗವೇನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ಬೈಪಾಸ್‍ಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಪ್ರೀತಂ ಜೆ ಗೌಡ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯವರು ಸುಮಾರು 45 ಕೋಟಿ ರೂಪಾಯಿ ಅನುದಾನ ಬಿಡುಗಡೆ ಒದಗಿಸಿದ್ದು, ಆ ಅನುದಾನದಲ್ಲಿ ಇಂದು ಲೋಕೋಪಯೋಗಿ ಇಲಾಖೆ ಮುಖಾಂತರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ನಗರದ ಸಮೀಪದಲ್ಲೇ ಇರುವ ಗವೇನಹಳ್ಳಿ, ದೇವೇಗೌಡನಗರ, ಕೃಷ್ಣಾನಗರ, ತಟ್ಟೇಕೆರೆ ಹಾಗೂ ಇತರೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ, ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಒಟ್ಟು ನೂರು ಕೋಟಿ
ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು. ದಿನೇ ದಿನೇ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸಬೇಕು. ವಿನಾಕಾರಣ ಹೊರಗಡೆ ಓಡಾಡಬಾರದು ಎಂದು ಅವರ ಮನವಿ ಮಾಡಿದರು.

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp