ಬೆಂಗಳೂರು: ಕ್ವಾರಂಟೈನ್‌ ಮುದ್ರೆ ಹಾಕಲ್ಪಟ್ಟ ವ್ಯಕ್ತಿಯ ಸ್ನೇಹಿತನಿಂದ ಮಹಿಳೆಯರ ಮೇಲೆ ಹಲ್ಲೆ

ಕ್ವಾರಂಟೈನ್‍ ಮುದ್ರೆ ಹಾಕಲ್ಪಟ್ಟ ವ್ಯಕ್ತಿಯೊಬ್ಬ ಬೀದಿಯಲ್ಲಿ ಮುಖಗವಸು ಧರಿಸದೇ ತಿರುಗುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯರ ಮೇಲೆ ಆತನ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ.

Published: 25th May 2020 06:26 PM  |   Last Updated: 25th May 2020 06:26 PM   |  A+A-


quarantine

ಕ್ವಾರಂಟೈನ್ ಸೀಲ್

Posted By : Lingaraj Badiger
Source : UNI

ಬೆಂಗಳೂರು: ಕ್ವಾರಂಟೈನ್‍ ಮುದ್ರೆ ಹಾಕಲ್ಪಟ್ಟ ವ್ಯಕ್ತಿಯೊಬ್ಬ ಬೀದಿಯಲ್ಲಿ ಮುಖಗವಸು ಧರಿಸದೇ ತಿರುಗುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯರ ಮೇಲೆ ಆತನ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ.

ಚಿಕ್ಕಬಾಣಾವರದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಮುಖಗವಸು ಧರಿಸದೆ ಹೋಗುತ್ತಿದ್ದ ಕೈಮೇಲೆ ಕ್ವಾರಂಟೈನ್‌ ಮುದ್ರೆ ಹಾಕಲಾಗಿದ್ದ ವ್ಯಕ್ತಿಯೊಬ್ಬನನ್ನು ಗಮನಿಸಿದ ನಳಿನಿ ಹಾಗೂ ನೇತ್ರಾವತಿ ಎಂಬವರು ಪ್ರಶ್ನಿಸಿದಾಗ ಆತನ ಜೊತೆಗಿದ್ದ ಬಸವ ಎಂಬುವನು ಮಹಿಳೆಯರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದರು.

'ಮಹಿಳೆಯರು ಜೋರಾಗಿ ಕಿರುಚಿಕೊಂಡ ಕೂಡಲೇ ಆರೋಪಿ ಬಸವ ಮತ್ತು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ. 

ಹತ್ತು ದಿನಗಳಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಪರಾರಿಯಾಗಿರುವುದರಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಆತನಲ್ಲಿ ಸೋಂಕು ಇರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಒಂದೇ ವೇಳೆ ಇದ್ದರೆ ಅವನಿಂದ ಸೋಂಕು ಹರಡುತ್ತದೆ. ಪೊಲೀಸರು ಆದಷ್ಟು ಬೇಗ ಆರೋಪಿ ಮತ್ತು ಕ್ವಾರಂಟೈನ್ ವ್ಯಕ್ತಿಯನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp