ಉಡುಪಿ: ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

32 ಹೊಸ ಕೇಸ್ ಗಳಲ್ಲಿ 28 ಮಂದಿ ಮಹಾರಾಷ್ಟ್ರ ಹಾಗೂ ಇಬ್ಬರು ದುಬೈಯಿಂದ ಜಿಲ್ಲೆಗೆ ಬಂದವರಾಗಿದ್ದು, ಎಲ್ಲರೂ ಕ್ವಾರಂಟೈನ್‍ನಲ್ಲಿದ್ದಾರೆ. ಸದ್ಯ 16 ಮಂದಿಯನ್ನು ಉಡುಪಿಯ ಡಾ.ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ ಡಿಸಿ ಜಗದೀಶ್ ರಿಂದ ಪರಿಶೀಲನೆ
ಉಡುಪಿ ಡಿಸಿ ಜಗದೀಶ್ ರಿಂದ ಪರಿಶೀಲನೆ

ಉಡುಪಿ: ಸೋಮವಾರ ಒಂದೇ ದಿನ 32 ಹೊಸ ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಒಟ್ಟು ಕೊರೋನಾ ಸೋಂಕಿತ ಸಂಖ್ಯೆ 108ಕ್ಕೆ ಮುಟ್ಟಿದೆ.

32 ಹೊಸ ಕೇಸ್ ಗಳಲ್ಲಿ 28 ಮಂದಿ ಮಹಾರಾಷ್ಟ್ರ ಹಾಗೂ ಇಬ್ಬರು ದುಬೈಯಿಂದ ಜಿಲ್ಲೆಗೆ ಬಂದವರಾಗಿದ್ದು, ಎಲ್ಲರೂ ಕ್ವಾರಂಟೈನ್‍ನಲ್ಲಿದ್ದಾರೆ. ಸದ್ಯ 16 ಮಂದಿಯನ್ನು ಉಡುಪಿಯ ಡಾ.ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಮುಖ್ಯ ಪೊಲೀಸ್ ಪೇದೆಗಳು ಮತ್ತು ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯಿತಿ ಕಚೇರಿಯ ಸಿಬ್ಬಂದಿಗೂ ಸೋಂಕು ತಗುಲಿದೆ. 

ಎಸ್ ಪಿ ಕಚೇರಿ ಡಿಎಆರ್ ಪೇದೆಗೆ ಕೊರೋನಾ ಸೋಂಕು ತಗುಲಿದ್ದು ಆ ಹಿನ್ನೆಲೆಯಲ್ಲಿ ಎಸ್ ಪಿ ಕಚೇರಿ ಮುಚ್ಚಲಾಗಿದೆ ಎಂಬ ವದಂತಿಗಳು ಹರಡಿದ್ದವು.ಆದರೆ ಇದೊಂದು ಸುಳ್ಳು ಸುದ್ದಿ ಎಂದು ಎಸ್ ಪಿ ವಿಷ್ಣುವರ್ಧನ್ ಸ್ಪಷ್ಟ ಪಡಿಸಿದ್ದಾರೆ. ಕಳೆದ 2 ದಿನಗಳಿಂದ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಸ್ಯಾನಿಟೈಸ್ ಮಾಡಿದ್ದಾಗಿ ಎಸ್ ಪಿ ತಿಳಿಸಿದ್ದಾರೆ.
ವದಂತಿಗಳು ಹರಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com