ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಲಾಕ್ ಡೌನ್ ನಂತರ ಪ್ರವಾಸೋದ್ಯಮ ಪುನಶ್ಚೇತನ ಹೇಗೆ: ಸಣ್ಣ ರೆಸಾರ್ಟ್, ಹೋಮ್ ಸ್ಟೇ ಗಳಿಗೆ ಆದ್ಯತೆ?

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಈಗ ಮರು ಆರಂಭದ ಸಮಯ. 'ಒಂದು ರಾಜ್ಯ, ಹಲವು ಜಗತ್ತು' ಎಂಬ ಟ್ಯಾಗ್ ಲೈನ್ ನೊಂದಿಗೆ ವನ್ಯಜೀವಿ ತಾಣಗಳಿಂದ ಹಿಡಿದು ಬೀಚ್ ವರೆಗೆ ಪ್ರವಾಸಿಗರಿಗೆ, ಪ್ರವಾಸಪ್ರಿಯರಿಗೆ ಹಲವು ಆಯ್ಕೆಗಳನ್ನು ನೀಡುವ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಈಗ ಮರು ಆರಂಭದ ಸಮಯ. 'ಒಂದು ರಾಜ್ಯ, ಹಲವು ಜಗತ್ತು' ಎಂಬ ಟ್ಯಾಗ್ ಲೈನ್ ನೊಂದಿಗೆ ವನ್ಯಜೀವಿ ತಾಣಗಳಿಂದ ಹಿಡಿದು ಬೀಚ್ ವರೆಗೆ ಪ್ರವಾಸಿಗರಿಗೆ, ಪ್ರವಾಸಪ್ರಿಯರಿಗೆ ಹಲವು ಆಯ್ಕೆಗಳನ್ನು ನೀಡುವ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದೆ.

ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದ ಹಲವು ಹೊಟೇಲ್ ಗಳು ಮುಚ್ಚಿಹೋಗಿವೆ. ಸಣ್ಣ ರೆಸಾರ್ಟ್ ಗಳು ಮತ್ತು ಹೋಂಸ್ಟೇಗಳು ಮುಂದಿನ ತಿಂಗಳುಗಳಲ್ಲಿ ಪ್ರವಾಸಿಗರ ಸೇವೆಗೆ ಸಜ್ಜಾಗಿ ನಿಂತಿವೆ.ಸ್ಥಳೀಯ ಪ್ರವಾಸಗಳು ಮತ್ತು ಕ್ಲೀನ್ ಪ್ರಾಪರ್ಟಿಸ್ ಗಳು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಮುಖ್ಯ ಅಂಶಗಳಾಗಲಿವೆ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಉತ್ತರ ಕರ್ನಾಟಕದ ಹೋಮ್ ಸ್ಟೇ ಮಾಲೀಕರ ಅನೌಪಚಾರಿಕ ಸಭೆ ನಡೆದಿತ್ತು. ಅದರಲ್ಲಿ ಪಶ್ಚಿಮ ಘಟ್ಟ ಭಾಗಗಳಲ್ಲಿ ಆತಿಥ್ಯ ವಲಯಗಳನ್ನು ಸಕ್ರಿಯಗೊಳಿಸುವ ಬಗ್ಗೆ ಮರು ಪರಿಶೀಲಿಸಲು ತೀರ್ಮಾನಿಸಲಾಗಿತ್ತು.

ಪ್ರವಾಸಿಗರು ಬರಲಾರಂಭಿಸಿದ ನಂತರವಷ್ಟೇ ಜನರು ಎಷ್ಟು ಸಂಖ್ಯೆಯಲ್ಲಿ ಬರುತ್ತಾರೆ, ಅವರು ಕೊರೋನಾ ಸೋಂಕಿನ ಭಯವಿಲ್ಲದೆ ಧೈರ್ಯವಾಗಿ ಹೇಗೆ ಕಳೆಯುತ್ತಾರೆ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ.

ಹುಬ್ಬಳ್ಳಿಯ ಪ್ರವಾಸಿ ತಜ್ಞ ಅಮೃತ್ ಜೋಷಿ ಹೇಳುವ ಪ್ರಕಾರ, ಸ್ಥಳೀಯ ಪ್ರವಾಸ ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಎನ್ನುತ್ತಾರೆ. ಪಶ್ಚಿಮ ಘಟ್ಟಗಳಲ್ಲಿರುವ ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳನ್ನು ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಏಕೆಂದರೆ ಇಲ್ಲಿ ಜನಸಂಖ್ಯೆ ಕಡಿಮೆಯಾಗಿದೆ, ಕೊರೋನಾ ಭಯದ ನಡುವೆ ಜನರ ಮನಸ್ಸಿಗೆ ಧೈರ್ಯ ಬರುವ ರೀತಿಯಲ್ಲಿ ಸೇವೆ ನೀಡುವ ಸವಾಲು ಹೋಮ್ ಸ್ಟೇ, ರೆಸಾರ್ಟ್ ಗಳ ಮೇಲಿದೆ ಎನ್ನುತ್ತಾರೆ.

ದಾಂಡೇಲಿಯ ಹೋಮ್ ಸ್ಟೇ ಮಾಲೀಕ ಮಹೇಶ್ ಕುಮಾರ್, ಲಾಕ್ ಡೌನ್ ನಂತರ ತಮ್ಮ ಉದ್ಯಮ ವಿಸ್ತರಣೆಯ ಯೋಜನೆಯನ್ನು ಹಲವರು ಕೈಬಿಟ್ಟಿದ್ದಾರೆ. ಭೋಗ್ಯಕ್ಕೆ ಜಮೀನನ್ನು ಕೊಂಡುಕೊಂಡವರು ಉದ್ಯಮ ಹೊಡೆತದಿಂದ ಬಳಲುತ್ತಿದ್ದಾರೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com