ಮಾನವ ಕಳ್ಳಸಾಗಣೆ: ಇಬ್ಬರು ಆದಿವಾಸಿ ಮಹಿಳೆಯರ ರಕ್ಷಣೆ

ಉದ್ಯೋಗ ಕೊಡಿಸುವ ಆಸೆ ತೋರಿಸಿ ಜಾರ್ಖಾಂಡ್ ನಿಂದ ಬೆಂಗಳೂರು ನಗರಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉದ್ಯೋಗ ಕೊಡಿಸುವ ಆಸೆ ತೋರಿಸಿ ಜಾರ್ಖಾಂಡ್ ನಿಂದ ಬೆಂಗಳೂರು ನಗರಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ. 

ಮಹಿಳೆಯರಿಗೆ ಉದ್ಯೋಗ ಕೊಡಿಸುವ ಆಸೆ ತೋರಿಸಿ 2019ರ ಅಕ್ಟೋಬರ್ ತಿಂಗಳಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದೆ. ಇಬ್ಬರಿಗೂ ನಾಲ್ಕು ಹಾಗೂ 8 ವರ್ಷದ ಪುತ್ರಿಯರಿದ್ದಾರೆ. ಕುಂಬಳಗೋಡಿನಲ್ಲಿರುವ ಕಾರ್ಖಾನೆಯೊಂದರಲ್ಲಿ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದು, ಆರಂಭದಲ್ಲಿ ಇಬ್ಬರಿಗೂ ತಿಂಗಳಿಗೆ 7,000ಜಿಂಜ 9,000 ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಇಬ್ಬರಿಗೂ ವಾರಕ್ಕೆ ಕೇವಲ ರೂ.200 ನೀಡಿದ್ದಲ್ಲದೆ, ಪ್ರತೀನಿತ್ಯ 15 ಗಂಟೆಗೂ ಹೆಚ್ಚು ಕಾಲ ದುಡಿಸಿಕೊಂಡು ದೌರ್ಜನ್ಯ ಎಸಗಲಾಗುತ್ತಿದೆ. 

ಇಬ್ಬರು ಕಳೆದ ಜನವರಿ ತಿಂಗಳಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಗುತ್ತಿಗೆದಾರ ಮತ್ತೆ ಕರೆ ತಂದಿದ್ದಾನೆ. ಅಲ್ಲದೆ, ಕಾರ್ಖಾನೆಯ ಸೂಪರ್ ವೈಸರ್ ಹಾಗೂ ಮತ್ತೊಬ್ಬ ನೌಕರ ಇಬ್ಬರೂ ಸೇರಿ ಇಬ್ಬರೂ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ಎಸಗಿದ್ದಾರೆಂದು ಹೇಳಲಾಗುತ್ತಿದೆ. 

ಮಾರ್ಚ್ ತಿಂಗಳಿನಲ್ಲಿಯೂ ಮತ್ತೆ ಮಹಿಳೆಯರು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ವ್ಯಕ್ತಿಯೊಬ್ಬನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಂಡ ವ್ಯಕ್ತಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಹೇಳಲಾಗುತ್ತಿದೆ. ಪ್ರಸುತ ಪ್ರಕಱಣ ಸಂಬಂಧ ಕುಂಬಳಗೋಡು ಹಾಗೂ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು ಮೂವರನ್ನು ಬಂಧನಕ್ಕೊಳಪಡಿಸಲಾಗಿದೆ. 

ಮೇ.5ರಂದು ಮಹಿಲೆಯರು ಕುಂಬಳಗೂಡು ಪೊಲೀಸ್ ಠಾಣೆಗೆ ತೆರಳಿದ್ದು, ತಮಗೆ ತಮ್ಮ ರಾಜ್ಯಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ನಿಕೋಲಾಸ್ ಎಂಬ ವ್ಯಕ್ತಿಯನ್ನು ಪರಿಚಯವಾಗಿದ್ದು, ಆತನ ಬಳಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿವರಿಸಿದ್ದಾರೆ. 

ನಿಕೋಲಾಸ್ ಎಂಬ ವ್ಯಕ್ತಿ ಜಾರ್ಖಾಂಡ್ ಮೂಲದವನೇ ಆಗಿದ್ದು, ಈತ ರಾಮನಗರದಲ್ಲಿ ಕೆಲಸ ಮಾಡಿ, ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ವಿಚಾರ ತಿಳಿಯುತ್ತಿದ್ದಂತೆಯೇ ನಿಕೋಲಾಸ್ ಸಾಮಾಜಿಕ ಜಾಣತಾಣದಲ್ಲಿ ವಿಚಾರ ಹಂಚಿಕೊಂಡಿದ್ದಾನೆ. ಈ ವಿಚಾರ ತಿಳಿದ ಸ್ವಾನ್ (ಸ್ಟ್ರೇಡೆಂಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್) ನಿಕೋಲಾಸ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೂಡಲೇ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. 

ಪ್ರಸ್ತುತ ಕಾರ್ಖಾನೆಯ ಸೂಪರ್ ವೈಸರ್'ನ್ನು ಬಂಧನಕ್ಕೊಳಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇಬ್ಬರೂ ಮಹಿಳೆಯರಿಗೂ ಸಮಾಜ ಕಲ್ಯಾಣ ಇಲಾಖೆ ಸ್ಪಂದನೆ ನೀಡಿ ಪರಿಹಾರವನ್ನೂ ನೀಡಿದೆ. ಮಹಿಳೆಯರು ನೆಲೆಯೂರಿದ್ದ ಗ್ರಾಮದಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನು ಉದ್ಯೋಗದ ಆಸೆ ತೋರಿಸಿ ದೆಹಲಿಗೆ ಕರೆದೊಯ್ದಿದ್ದಾನೆ. ಅಲ್ಲಿ ಮಹಿಳೆಯರನ್ನು ಮಾರಾಟ ಮಾಡಿದ್ದಾನೆ. ಅಲ್ಲಿಂದ ಮಹಿಳೆಯರು ಬೆಂಗಳೂರಿಗೆ ಬಂದಿದ್ದಾರೆಂದು ನಿಕೋಲಾಸ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com