13 ಸಾವಿರ ಮನೆಗಳಲ್ಲಿ ಸಾರಿ, ಐಎಲ್ಐ ಕೇಸ್ ಪತ್ತೆ: ಸಮೀಕ್ಷಾ ವರದಿಯಲ್ಲಿ ಬಹಿರಂಗ

ನಗರದಲ್ಲಿನ ಸುಮಾರು 13,341 ಮನೆಗಳಲ್ಲಿ ಕೋವಿಡ್- 19 ಪಾಸಿಟಿವ್ ಪ್ರಕರಣಗಳಾಗಿ ಬದಲಾಗುತ್ತಿರುವ ತೀವ್ರ ಉಸಿರಾಟದಂತಹ ಸಾರಿ ಮತ್ತು ಐಎಲ್ಐ ಪ್ರಕರಣಗಳು ಪತ್ತೆಯಾಗಿವೆ ಎಂದು ಸಮೀಕ್ಷಾ ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿನ ಸುಮಾರು 13,341 ಮನೆಗಳಲ್ಲಿ ಕೋವಿಡ್- 19 ಪಾಸಿಟಿವ್ ಪ್ರಕರಣಗಳಾಗಿ ಬದಲಾಗುತ್ತಿರುವ ತೀವ್ರ ಉಸಿರಾಟದಂತಹ ಸಾರಿ ಮತ್ತು ಐಎಲ್ಐ ಪ್ರಕರಣಗಳು ಪತ್ತೆಯಾಗಿವೆ ಎಂದು ಸಮೀಕ್ಷಾ ವರದಿಗಳಿಂದ ತಿಳಿದುಬಂದಿದೆ. 

ಸಾರಿ ಮತ್ತು ಐಎಲ್ ಐ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಪರೀಕ್ಷೆ ಮಾಡುತ್ತಿದ್ದ ಸರ್ಕಾರ ನಂತರ ಆರೋಗ್ಯ ಕಾರ್ಯಕರ್ತೆಯರನ್ನು ಮನೆ ಮನೆಗೆ ಕಳುಹಿಸಿ ಮಾಹಿತಿ ಸಂಗ್ರಹ ಮಾಡಿತ್ತು. ಸಮೀಕ್ಷೆ ಮಾಡಿದ ವರದಿಗಳನ್ನು ವೆಬ್ ಸೈಟ್ ಗಳಲ್ಲಿ ಹಾಕಲಾಗುತ್ತಿತ್ತು. ಅಂತಿಮ ವರದಿಯಲ್ಲಿ ನಗರದಲ್ಲಿರುವ ಸುಮಾರು 13,341 ಮನೆಗಳಲ್ಲಿರುವ ಜನರಲ್ಲಿ ಸಾರಿ ಹಾಗೂ ಐಎಲ್ಎಲ್ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ

ಕಂಟೈನ್ಮೆಂಟ್ ಝೋನ್ ನಲ್ಲಿರುವ ಐಎಲ್ಐ ಪ್ರಕರಣಗಳು ಹಾಗೂ ಟ್ರಾವೆಲ್ ಹಿಸ್ಟರಿ ಯುಳ್ಳವರನ್ನು ನಿಯಮದಂತೆ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ರವಿಕುಮಾರ್ ಸುರ್ಪುರ್ ಅವರು ಹೇಳಿದ್ದಾರೆ. 

ಕೊರೋನಾ ವಾರ್ ರೂಮ್ ನಿಂದ ಬಂದಿರುವ ವರದಿಗಳ ಪ್ರಕಾರ ಪ್ರಸ್ತುತ ಈಗಾಗಲೇ ಶೇ.67.16 ರಷ್ಟು ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 50,73,830ಮನೆಗಳಲ್ಲಿ ಗರ್ಭಿಣಿ, ಬಾಣಂತಿಯರು, ಹಿರಿಯ ನಾಗರೀಕರಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ರಾಜ್ಯದ ಕಲಬುರಗಿಯಲ್ಲಿದಂ 1,902 ಮನೆಗಳಲ್ಲಿ ಸಾರಿ ಹಾಗೂ ಎಲ್ಐಎಲ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ, ಇನ್ನು ಬೆಂಗಳೂರು ನಗರದಲ್ಲಿ  1,703, ಶಿವಮೊಗ್ಗ  1,217 ಪ್ರಕರಣಗಳು ಕಂಡು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com