ಕೊರೋನಾ ಆತಂಕದ ನಡುವೆಯೇ ಶರಾವತಿ ಜಲ ವಿದ್ಯುತ್ ಯೋಜನೆಗೆ ಸಮೀಕ್ಷೆ ಆರಂಭ

ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಜಲ ವಿದ್ಯುತ್ ಯೋಜನೆಯನ್ನು ಪರಿಸರ ತಜ್ಞರು ಮತ್ತು ಇಂಧನ ತಜ್ಞರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಕೊರೋನಾ ವೈರಸ್ ಮತ್ತು ಜೂನ್ ನಲ್ಲಿ ಮಾನ್ಸೂನ್ ಆರಂಭವಾಗುತ್ತಿದ್ದರೂ ಶರಾವತಿ ಜಲ ವಿದ್ಯುತ್ ಯೋಜನೆಯ ಜಿಯೋಟೆಕ್ನಿಕಲ್ ಅಧ್ಯಯನಗಳನ್ನು, ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಶರಾವತಿ ಜಲವಿದ್ಯುತ್ ಯೋಜನೆಗೆ ಸಮೀಕ್ಷೆ ಆರಂಭ
ಶರಾವತಿ ಜಲವಿದ್ಯುತ್ ಯೋಜನೆಗೆ ಸಮೀಕ್ಷೆ ಆರಂಭ

ಬೆಂಗಳೂರು: ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಜಲ ವಿದ್ಯುತ್ ಯೋಜನೆಯನ್ನು ಪರಿಸರ ತಜ್ಞರು ಮತ್ತು ಇಂಧನ ತಜ್ಞರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಕೊರೋನಾ ವೈರಸ್ ಮತ್ತು ಜೂನ್ ನಲ್ಲಿ ಮಾನ್ಸೂನ್ ಆರಂಭವಾಗುತ್ತಿದ್ದರೂ ಶರಾವತಿ ಜಲ ವಿದ್ಯುತ್ ಯೋಜನೆಯ ಜಿಯೋಟೆಕ್ನಿಕಲ್ ಅಧ್ಯಯನಗಳನ್ನು, ಸಮೀಕ್ಷೆಯನ್ನು ಆರಂಭಿಸಲಾಗಿದೆ.

ಸಮೀಕ್ಷೆಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಅಧ್ಯಯನಕ್ಕೆ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದ್ದು ಮಾನ್ಸೂನ್ ಆರಂಭವಾದ ಕೂಡಲೇ ಕೆಲಸ ನಿಲ್ಲಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೂ ಇಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಮೀಕ್ಷೆ ಸಮಯದಲ್ಲಿ ಹಲವು ಪ್ರಬೇಧಗಳು, ಅಪರೂಪದ ಸಂತಾನಗಳು ನಶಿಸಿ ಹೋಗುವ ಸಾಧ್ಯತೆಯಿದೆ ಎಂಬ ಆರೋಪ ಕೇಳಿಬಂದಿದೆ.

ಉಪಕರಣದಲ್ಲಿ ಮಾಡುವ ಕೆಲಸಗಳನ್ನು ಕಾರ್ಗಲ್ ವಲಯದಲ್ಲಿ ಕಾರ್ಮಿಕರು ಕೈಯಿಂದಲೇ ಮಾಡಲಿದ್ದಾರೆ. ಈ ಬಗ್ಗೆ ಮೇ 6ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ನೀಡಲಾಗಿದೆ.

ಎಲ್ಲಾ ಷರತ್ತುಗಳನ್ನು ಪೂರೈಸಲಾಗಿದೆಯೆ ಎಂದು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ. ಮಳೆಗಾಲ ಪ್ರಾರಂಭವಾದ ನಂತರ ನಾವು ಕೆಲಸವನ್ನು ನಿಲ್ಲಿಸುತ್ತೇವೆ. ಅಭಯಾರಣ್ಯದ ಮಿತಿಯೊಳಗೆ ನಾವು ಯಾವುದೇ ವಾಹನವನ್ನು ಅನುಮತಿಸಿಲ್ಲ. ವಾಸ್ತವವಾಗಿ, ಸಮೀಕ್ಷೆ ನಡೆಸುವ ವೇಳೆ ಕಾರ್ಮಿಕರನ್ನೆಲ್ಲಾ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ಸಮೀಕ್ಷೆಗೆ ಏನೇನು ಷರತ್ತುಗಳು: ಮರಗಳನ್ನು ಧರೆಗೆ ಉರುಳಿಸುವಂತಿಲ್ಲ.
ವಾಹನಗಳನ್ನು ಬಳಸುವಂತಿಲ್ಲ.
ವನ್ಯಜೀವಿಗಳಿಗೆ ತೊಂದರೆಯುಂಟುಮಾಡಬಾರದು.
ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯೊಳಗೆ ಸಮೀಕ್ಷೆ ಮುಗಿಸಬೇಕು.
ಭಾರೀ ಮೆಷಿನ್ ಗಳನ್ನು ಕೆಲಸಗಾರರೇ ಕೊಂಡೊಯ್ಯಬೇಕು.
ಅಭಯಾರಣ್ಯದೊಳಗೆ ಡೇರೆಗಳ ನಿರ್ಮಾಣವಿಲ್ಲ
ಕಾರ್ಮಿಕರಿಗೆ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ
ಮಳೆಗಾಲದಲ್ಲಿ ಸಮೀಕ್ಷೆ ಕೆಲಸವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com