ನಮಗೂ ಅನುಮತಿ ನೀಡಿ: ಸರ್ಕಾರಕ್ಕೆ ಮಾಲ್, ಪ್ರವಾಸೋದ್ಯಮ ಸಂಘ ಪದಾಧಿಕಾರಿಗಳಿಂದ ಮನವಿ

ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಅಖಿಲ ಭಾರತ ಶಾಪಿಂಗ್ ಮಾಲ್'ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದವು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಅಖಿಲ ಭಾರತ ಶಾಪಿಂಗ್ ಮಾಲ್'ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದವು. 

ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಅಧ್ಯಕ್ಷ ಕೆ.ಶಾಮರಾಜು ಮಾತನಾಡಿ, ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಾರ್ಗಸೂಚಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾಸ ನಡೆಸುವಂತೆ ಈಗಾಗಲೇ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರಂದು ತಿಳಿಸಿದ್ದಾರೆ. 

ಹೋಟೆಲ್ ಗಳಲ್ಲಿ ಈಗಾಗಲೇ ಪಾರ್ಸೆಲ್ ಸೇವೆಗೆ ಅವಕಾಶ ನೀಡಲಾಗಿದ್ದು, ಅಲ್ಲಿಯೇ ಆಹಾರ ಸೇವಿಸಲು ಅನುಮತಿ ನೀಡಬೇಕು. ಜೊತೆಗೆ ಎಲ್ಲಾ ರೀತಿಯ ಸಾಮಾಜಿಕ ಅಂತರ ಮತ್ತು ಶುಚಿತ್ವ ಕಾಪಾಡಲಾಗುವುದು ಎಂದು ತಿಳಿಸಿದ್ದಾರೆ. 

ಅಲ್ಲದೆ. ವಾಣಿಜ್ಯ ಕಟ್ಟಗಳಲ್ಲಿರು ಹೋಟೆಲ್ ಆಸ್ತಿ ತೆರಿಗೆ ಮನ್ನಾ ಮಾಡಬೇಕು. 3 ತಿಂಗಳ ವಿದ್ಯುತ್ ಶುಲ್ಕ ತೆರಿಗೆ ಮನ್ನಾ ಮಾಡಬೇಕು. ಹೋಟೆಲ್ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಬೆಂಗಳೂರಿನ 25 ಸಾವಿರ ಹೋಟೆಲ್ ಗಳು ಸೇರಿ ರಾಜ್ಯದಲ್ಲಿ 50 ಸಾವಿರ ಹೋಟೆಲ್ ಗಳಿವೆ. ಇವುಗಳ ನೆರವಿಗೆ ಸರ್ಕಾರ ಧಾವಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com