ತೇಜಸ್ ಹಗುರ ಯುದ್ಧ ವಿಮಾನ ಎಂಕೆ-1ಗೆ ಅಂತಿಮ ಕಾರ್ಯನಿರ್ವಹಣೆ ಅನುಮತಿ ನೀಡಿದ ಹೆಚ್ ಎಎಲ್

ತೇಜಸ್ ಹಗುರ ಯುದ್ಧ ವಿಮಾನಕ್ಕೆ(ಎಲ್ ಸಿಎ) ಅಂತಿಮ ಕಾರ್ಯನಿರ್ವಹಣೆ ಅನುಮತಿ(ಎಫ್ ಒಸಿ)ಯನ್ನು ಹೆಚ್ ಎಎಲ್ ನೀಡಿದ್ದು, ತಮಿಳು ನಾಡಿನ ಸುಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.
ಏರ್ ಚೀಫ್ ಮಾರ್ಷಲ್ ಆರ್ ಕೆ ಬದೌರಿ ಅವರಿಂದ ಪರಿಶೀಲನೆ
ಏರ್ ಚೀಫ್ ಮಾರ್ಷಲ್ ಆರ್ ಕೆ ಬದೌರಿ ಅವರಿಂದ ಪರಿಶೀಲನೆ

ಬೆಂಗಳೂರು: ತೇಜಸ್ ಹಗುರ ಯುದ್ಧ ವಿಮಾನ ಎಂಕೆ-1ಗೆ (ಎಲ್ ಸಿಎ) ಅಂತಿಮ ಕಾರ್ಯನಿರ್ವಹಣೆ ಅನುಮತಿ(ಎಫ್ ಒಸಿ)ಯನ್ನು ಹೆಚ್ ಎಎಲ್ ನೀಡಿದ್ದು, ತಮಿಳು ನಾಡಿನ ಸುಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.

ಹಿಂದೂಸ್ತಾನ್ ಅರೊನಾಟಿಕ್ಸ್ ಲಿಮಿಟೆಡ್ ನ ಮತ್ತೊಂದು ಮೈಲಿಗಲ್ಲು ಇದಾಗಿದ್ದು ಮಾನವನ ಕಾರ್ಯನಿರ್ವಹಣೆ ಸಮಯವನ್ನು ಉಳಿತಾಯ ಮಾಡಲಿದೆ.

ಹೆಚ್ ಎಎಲ್ ನಲ್ಲಿ ಮತ್ತೆ ನಾಲ್ಕು ಎಫ್ಒಸಿ ಎಲ್ ಸಿಎಗಳು ಉತ್ಪಾದನೆ ಮತ್ತು ಪರೀಕ್ಷೆಯ ಸುಧಾರಣೆ ಹಂತದಲ್ಲಿದ್ದು, ವಾಯುಪಡೆಗೆ ಸದ್ಯದಲ್ಲಿಯೇ ಸೇರ್ಪಡೆಯಾಗಲಿದೆ. ಹೆಚ್ ಎಎಲ್ ಯುದ್ಧ ವಿಮಾನ ಹಾರಾಟ ಸಿಬ್ಬಂದಿ ಮತ್ತು ನಿರ್ವಹಣೆ ಸಿಬ್ಬಂದಿ ಇಬ್ಬರಿಗೂ ತರಬೇತಿ ನೀಡುತ್ತಿದ್ದು ಈಗಾಗಲೇ 18 ತಂಡಗಳೊಂದಿಗೆ ಸೇರಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com