ಹಾಸನದಲ್ಲಿ 12 ಮಂದಿಗೆ ಕೊರೋನಾ: ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆ, 7 ಪ್ರದೇಶಗಳು ಸೀಲ್'ಡೌನ್

ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಬ್ಬರ ಮುಂದುವರೆದಿದ್ದು, ಬುಧವಾರ ಮತ್ತೆ 1 ವರ್ಷದ ಮಗು ಸೇರಿ 12 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಬ್ಬರ ಮುಂದುವರೆದಿದ್ದು, ಬುಧವಾರ ಮತ್ತೆ 1 ವರ್ಷದ ಮಗು ಸೇರಿ 12 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. 

ಬುಧವಾರ ಕಂಡ ಬಂದ 12 ಮಂದಿಗೆ ಎರಡೇ ಪರೀಕ್ಷೆಯಲ್ಲಿ ಅಚ್ಚರಿಯ ಪರೀಕ್ಷಾ ವರದಿ ಬಂದಿದೆ. ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಬಳಿಕ ಎರಡನೇ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಸೋಂಕಿತರೆಲ್ಲರಿಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಗೆ ಕಂಟಕವಾಗಿರುವ ಮುಂಬೈ ನಂಜು ಹೆಚ್ಚಾಗುತ್ತಲೇ ಇದೆ. 

ಈ ಬೆಳವಣಿಗೆ ಸಹಜವಾಗಿಯೇ ಜನತೆಯಲ್ಲಿ ಆತಂಕವನ್ನು ಹೆಚ್ಚಾಗುವಂತೆ ಮಾಡುತ್ತಿದೆ. ಈಗ ಜಿಲ್ಲೆಯಲ್ಲಿ ಸುಮಾರು 1600 ಜನರು ಈಗಲೂ ಕ್ವಾರಂಟೈನ್ ನಲ್ಲಿದ್ದಾರೆ. 

ಈಗ ಜಿಲ್ಲೆಯಲ್ಲಿ ಒಟ್ಟು 7 ಪ್ರದೇಶಗಳನ್ನು ಸೀಲ್'ಡೌನ್ ಮಾಡಲಾಗಿದ್ದು, ಹಾಸನದ ವಿಶ್ವೇಸ್ವರಯ್ಯ ಬಡಾವಣೆ ರಸ್ತೆ, ಇಂದಿರಾನಗರ ಬಡಾವಣೆ ಎರಡು ಕ್ರಾಸ್ ಗಳು, ಗಾಡೇನಹಳ್ಳಿ ಪೊಲೀಸ್ ಕ್ವಾಟ್ರಸ್, ಹೊಳೆನರಸೀಪುರದ ಪೊಲೀಸ್ ಕ್ವಾಟ್ರಸ್ ಮತ್ತು ಹೌಸಿಂಗ್ ಬೋರ್ಡ್ ಏರಿಯಾ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಇಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com