ಬಿಡಿಎ ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆ ತಿದ್ದುಪಡಿಗಾಗಿ  ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಮನೆ ನಿರ್ಮಿಸಿ 12 ವರ್ಷ ಆಗಿದ್ದರೆ ಮಾತ್ರ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ.
ವಜೂಬಾಯಿ ವಾಲಾ
ವಜೂಬಾಯಿ ವಾಲಾ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆ ತಿದ್ದುಪಡಿಗಾಗಿ  ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಮನೆ ನಿರ್ಮಿಸಿ 12 ವರ್ಷ ಆಗಿದ್ದರೆ ಮಾತ್ರ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ.

ಇದಕ್ಕೆ ಆಯಾ ಜಾಗದ ಮಾರ್ಗಸೂಚಿ ದರದ ಪ್ರಕಾರ ದಂಡನಾ ಶುಲ್ಕ ಪಾವತಿಸಬೇಕಾಗುತ್ತದೆ. 12 ವರ್ಷಗಳಿಂದ ಈಚೆಗೆ ಮನೆ ನಿರ್ಮಿಸಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ. ಇಂತಹವರ ವಿರುದ್ಧ ಇನ್ನೆರಡು ವರ್ಷಗಳಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಡಿಎಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. 

20/30 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.10ರಷ್ಟುದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. 30/40 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.20ರಷ್ಟು, 40/60 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.40ರಷ್ಟುಮತ್ತು 50/80 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ
ಶೇ.50ರಷ್ಟುದಂಡ ಕಟ್ಟಿಸಕ್ರಮ ಮಾಡಲು ಅವಕಾಶ ನೀಡಲಾಗಿದೆ. 

ಸುಮಾರು 45 ಸಾವಿರದಷ್ಟುಇರಬಹುದಾದ ಮನೆಗಳನ್ನು ಸಕ್ರಮಗೊಳಿಸಲು ಮಾರ್ಗಸೂಚಿ ಆಧಾರದ ಮೇಲೆ ಕನಿಷ್ಠ ಶುಲ್ಕ ವಿಧಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸುಮಾರು .10 ಸಾವಿರ ಕೋಟಿ ಆದಾಯ ಬರುವ ನಿರೀಕ್ಷಿಸಲಾಗಿದೆ. ಮೀಸಲು ಪಾರ್ಕ್, ಆಟದ ಮೈದಾನ, ರಸ್ತೆಗಳು ಮುಂತಾದವು ಇದರ ವ್ಯಾಪ್ತಿಗೆ ಬರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com