ಕೊರೋನಾ ವೈರಸ್ ಗೆ ಕರ್ನಾಟಕ ತತ್ತರ: ಹೊಸದಾಗಿ 178 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ತತ್ತರಿಸಿದ್ದು, ಇಂದು ಒಂದೇ ದಿನ ಬರೊಬ್ಬರಿ 178 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ತತ್ತರಿಸಿದ್ದು, ಇಂದು ಒಂದೇ ದಿನ ಬರೊಬ್ಬರಿ 178 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮಿತಿಮೀರುತ್ತಿದ್ದು, ಇಂದು ರಾಜ್ಯದಲ್ಲಿ ಹೊಸದಾಗಿ 178 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆಯಾಗಿದೆ.

ಇಂದು ಬೆಳಗಿನ ಹೆಲ್ತ್ ಬುಲೆಟ್ ನ್ ನಲ್ಲಿ ನಿನ್ನೆ ಸಂಜೆಯಿಂದ ಇಂದು ಬೆಳಗಿನ ವರೆಗೂ ಬರೊಬ್ಬರಿ 178 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ರಾಯಚೂರು 62, ಯಾದಗಿರಿ 60, ಕಲಬುರಗಿ 15, ಉಡುಪಿ 15, ಬೆಂಗಳೂರು 9, ಚಿಕ್ಕಬಳ್ಳಾಪುರ 4, ದಾವಣಗೆರೆ 4, ಮೈಸೂರು 2, ಮಂಡ್ಯ 2, ಶಿವಮೊಗ್ಗ 1, ಬೆಂಗಳೂರು ಗ್ರಾಮಾಂತರ 1, ಚಿತ್ರದುರ್ಗ 1, ಧಾರವಾಡ 1 ಕೊರೊನಾ ಸೋಂಕು ದೃಢಪಟ್ಟಿದೆ.

2711 ಸೋಂಕಿತರ ಪೈಕಿ 47 ಮಂದಿ ಮೃತಪಟ್ಟಿದ್ದಾರೆ. 869 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com