ಮೈಸೂರು: ನಿಂದಿಸಿದ್ದಕ್ಕೆ ಆಸಿಡ್‌ ದಾಳಿ ನಡೆಸಿದ ವ್ಯಕ್ತಿಯ ಬಂಧನ

ನಿಂದಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Published: 29th May 2020 03:04 PM  |   Last Updated: 29th May 2020 03:04 PM   |  A+A-


Acid attack on girl in Delhi, jilted lover held

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಮೈಸೂರು: ನಿಂದಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಳಿಕೆರೆಯ ನಿವಾಸಿ ಕಾಳಪ್ಪ ನಾಯಕ್(35) ಆಸಿಡ್ ದಾಳಿಗೆ ಒಳಗಾದವರು. ಆಸಿಡ್ ದಾಳಿಯಿಂದ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸಿಡ್ ದಾಳಿ ನಡೆಸಿದ ಬಿಳಿಕೆರೆಯ ಚಂದ್ರಶೇಖರಾಚಾರಿ(40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಳಪ್ಪ ನಾಯಕ ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಚಂದ್ರಶೇಖರಾಚಾರಿ ಆಸಿಡ್ ದಾಳಿ ನಡೆಸಿದ್ದು, ಕಾಳಪ್ಪನಾಯಕನ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿನಲ್ಲಿ ಗಾಯವಾಗಿದೆ. 

ಬಿಳಿಕೆರೆ ಪೊಲೀಸ್ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp