ಬೆಂಗಳೂರು: ಕೊಮ್ಮಘಟ್ಟ ಕೆರೆಯಲ್ಲಿ ಟನ್ ಗಟ್ಟಲೆ ಸತ್ತ ಮೀನುಗಳ ರಾಶಿ!

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೊಮ್ಮಘಟ್ಟ ಕೆರೆಯಲ್ಲಿ ಶುಕ್ರವಾರ ರಾಶಿ ರಾಶಿ ಮೀನುಗಳು ಸತ್ತು ನೀರುನಲ್ಲಿ ತೇಲುತ್ತಿದ್ದ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ನೀರಿನಲ್ಲಿ ಸತ್ತ ಮೀನುಗಳ ರಾಶಿ
ನೀರಿನಲ್ಲಿ ಸತ್ತ ಮೀನುಗಳ ರಾಶಿ

ಬೆಂಗಳೂರು: ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೊಮ್ಮಘಟ್ಟ ಕೆರೆಯಲ್ಲಿ ಶುಕ್ರವಾರ ರಾಶಿ ರಾಶಿ ಮೀನುಗಳು ಸತ್ತು ನೀರುನಲ್ಲಿ ತೇಲುತ್ತಿದ್ದ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಸುಮಾರು 35 ಎಕೆರೆ ವಿಸ್ತೀರ್ಣದಲ್ಲಿರುವ ಕೊಮ್ಮಘಟ್ಟ ಕೆರೆಯಲ್ಲಿ ಇಂದು ಟನ್ ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿದ್ದವು. ಸ್ಥಳೀಯ ಮೀನುಗಾರರೊಬ್ಬರು ತೆಪ್ಪದ ಮೂಲಕ ನೀರಿನ ಮೇಲಿದ್ದ ರಾಶಿ ರಾಶಿ ಮೀನುಗಳನ್ನು ತೆರವು ಮಾಡುತ್ತಿದ್ದ ದೃಶ್ಯ ವಿದ್ರಾವಕವಾಗಿತ್ತು.  ಕೊಮ್ಮಘಟ್ಟ ಕೆರೆಯಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೇ ಕೂಡ ಸಾಕಷ್ಟು ಬಾರಿ ಇಲ್ಲಿ ಮಾಲೀನ್ಯದಿಂದಾಗಿ ಮೀನುಗಳ ಸತ್ತು ನೀರಿನ ಮೇಲೆ ತೇಲುತ್ತಿದ್ದ ಸಾಕಷ್ಟು ಉದಾಹರಣೆಗಳಿವೆ, ಹೀಗಿದ್ದೂ ಇಲ್ಲಿನ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಾಗಿದ್ದಾರೆ.

ನೀರಿನ ಮಾಲೀನ್ಯಕ್ಕೆ ಸ್ಥಳೀಯ ಕಾರ್ಖಾನೆಗಳೇ ಕಾರಣ
ಕೊಮ್ಮಘಟ್ಟ ಕೆರೆ ಇಲ್ಲಿನ ಸಮೀಪದ ಕಾರ್ಖಾನೆಗಳ ತ್ಯಾಜ್ಯದ ನೀರನ್ನು ಅವೈಜ್ಞಾನಿಕವಾಗಿ ಬಿಡುತ್ತಿರುವುದೇ ಇಲ್ಲಿನ ಕೆರೆ ಮಾಲೀನ್ಯಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಂಗೇರಿಯ ಸರ್ ಎಂ ವಿಶ್ವೇಶ್ವರಾಯ ಲೇಔಟ್ ನ ನಿವಾಸಿಗಳು ಅವೈಜ್ಞಾನಿಕ ಕಲ್ಮಶ ನೀರನ್ನು ಕೆರೆಗೆ  ಬಿಡುತ್ತಿರುವ ಕುರಿತು ಬಿಡಿಎ ಅಧಿಕಾರಿಗಳಿ ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com