ಕಾರ್ಮಿಕ ಇಲಾಖೆಯ 1 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಬಯಲಿಗೆಳೆದ ಕಾರ್ಯಕರ್ತ!

ಕಾರ್ಮಿಕ ಇಲಾಖೆಯಲ್ಲಿ ಸುಮಾರು 1 ಕೋಟಿ ರು ವರೆಗೆ ಭ್ರಷ್ಟಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಕಾರ್ಯಕರ್ತ ಬಯಲಿಗೆಳೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಸುಮಾರು 1 ಕೋಟಿ ರು ವರೆಗೆ ಭ್ರಷ್ಟಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಕಾರ್ಯಕರ್ತ ಬಯಲಿಗೆಳೆದಿದ್ದಾರೆ.

ನಿಯಮ 32ರ ಪ್ರಕಾರ ಕಾರ್ಮಿಕ ಇಲಾಖೆಯ  20 ಇನ್ಸ್ ಪೆಕ್ಟರ್ ಗಳನ್ನು ಹಿರಿಯ ಇನ್ಸ್ ಪೆಕ್ಟರ್ ಗಳಾಗಿ ಬಡ್ತಿ ನೀಡಲಾಯಿತು. ನಿಯಮವಾರು ಬಡ್ತಿ ಸಂದರ್ಭದಲ್ಲಿ ಇಲಾಖೆಯ ಲೋಪ ದೋಷ ಬಳಸಿಕೊಂಡು ಆಯಕಟ್ಟಿನ ಜಾಗಗಳಿಗೆ ಇನ್ಸ್ ಪೆಕ್ಟರ್ ಗಳು ಬಡ್ತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಪ್ರತಿಯೊಬ್ಬರು 3ರಿಂದ 5 ಲಕ್ಷ ರು ಹಣ ಪಾವತಿಸಿದ್ದು ಸುಮಾರು 1 ಕೋಟಿ ವರೆಗೂ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ನಿಯಮ 32 ರ ಅಡಿಯಲ್ಲಿ ಈ ಬಡ್ತಿನೀಡಲು   ಹಿರಿಯ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ವಿಸ್ಲ್ ಬ್ಲೋವರ್ ಹೇಳಿದ್ದಾರೆ.

ಕೇವಲ ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ಈ ನಿಯಮದಡಿ ಬಡ್ತಿ ನೀಡಲು ಅವಕಾಶವಿರುತ್ತದೆ. ಆದರೆ ಇಲಾಖೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಇಲಾಖೆಯ ನೈತಿಕತೆ ಬಗ್ಗೆ ಪ್ರಶ್ನೆ ಎತ್ತಿದೆ. ಗುರುವಾರ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕಾರ್ಮಿಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ಮತ್ತು ಸ್ಟೆನೋಗ್ರಾಫರ್ ಗಳಿಗೆ ಬಡ್ತಿ ನೀಡಲಾಗಿದೆ.

ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ, ಶೇ. 48 ರಷ್ಟು ಸಿಬ್ಬಂದಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ.176 ತಾಲೂಕುಗಳಲ್ಲಿ  100 ತಾಲೂಕುಗಳಲ್ಲಿ ನಮಗೆ ಸಿಬ್ಬಂದಿ ಗಂಭೀರ ಕೊರತೆ ಎದುರಿಸುತ್ತಿದ್ದೇವೆ. ಕೆಲ ಹುದ್ದೆಗಳಿಗೆ ನಾವು ನೇರ ನೇಮಕಾತಿ ಮತ್ತು ಬಡ್ತಿ ನೀಡುವ ಮೂಲಕ ಬಡ್ತಿ ನೀಡುತ್ತಿದ್ದೇವೆ ಎಂದು ಕಾರ್ಮಿಕ ಇಲಾಖೆ ಆಯುಕ್ತ ಕೆಜಿ ಶಾಂತಾರಾಮ್ ಹೇಳಿದ್ದಾರೆ. 

ಇನ್ನೂ ಈ ಬಗ್ಗೆ ನನಗೆ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಶಿವರಾಮ್ ನಿವೃತ್ತಿ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com