ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪೊಲೀಸ್ ಪೇದೆಗೆ ಕೊರೋನಾ: ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್

ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆಗೆ ಕೊರೊನಾ ಸೋಂಕು‌ ಧೃಡ ಪಟ್ಟಿದ್ದರಿಂದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಬಳ್ಳಾರಿ: ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆಗೆ ಕೊರೊನಾ ಸೋಂಕು‌ ಧೃಡ ಪಟ್ಟಿದ್ದರಿಂದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಈ  ಠಾಣೆಯ ವ್ಯಾಪ್ತಿಯ ಜನರು ದೂರು ಸೇರಿದಂತೆ ಠಾಣೆಗೆ ಸಂಬಂಧಿಸಿದಂತೆ ವಿಚಾರಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪಿಎಸ್ ಐ ಸೇರಿ 42 ಸಿಬ್ಬಂದಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನು ಕೊಟ್ಟೂರು ಪೊಲೀಸ್ ವಸತಿ ಗೃಹಗಳ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com