ಕೋವಿಡ್-19 ಲಾಕ್'ಡೌನ್ 5.0: ದೇಗುಲ ಸೇರಿ ಇತರೆ ಪ್ರಾರ್ಥನಾ ಮಂದಿರಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜೂನ್ 8 ರಂದು ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಇತರೆ ಪ್ರಾರ್ಥನಾ ಮಂದಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತೀ ನೀಡಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜೂನ್ 8 ರಂದು ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಇತರೆ ಪ್ರಾರ್ಥನಾ ಮಂದಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತೀ ನೀಡಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಅಬ್ದುಲ್ ಅಜೀಮ್ ಅವರು ಮಾತನಾಡಿ, ಪ್ರಾರ್ಥನೆ ಸಲ್ಲಿಸುವವರು ಕನಿಷ್ಠ 1 ಮೀಟರ್ ಅಂತರವನ್ನು ಕಾಪಾಡಬೇಕು. ಜ್ವರ ಸೇರಿದಂತೆ ಇತರೆ ಪರಿಶೀಲನೆಗಳ ಬಳಿಕ 10-15 ನಂತರ ಪ್ರಾರ್ಥನೆ ಆರಂಭಿಸಲಾಗುತ್ತದೆ. ಶುಕ್ರವಾರದ ಪ್ರಾರ್ಥನೆಯನ್ನು 20 ನಿಮಿಷಗಳೊಳಗಾಗಿ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ. 

ಮಸೀದಿಗಳಲ್ಲಿ ಬಡವರಿಗೆ ಆಹಾರ ವಿತರಿಸುವುದು, ಹಸ್ತಲಾಭವ ಮಾಡುವುದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿ ಸೇರುವುದಕ್ಕೆ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ. 

ಇನ್ನು ದೇವಾಲಯಗಳಿಗೂ ಮುಜರಾಯಿ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ದೇವಾಲಯಗಳಿಗೆ ಬರುವ ಭಕ್ತರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಖಡ್ಡಾಯ. ದೇವಾಲಯಕ್ಕೆ ಬರುವ ಭಕ್ತರಿಗೆ ಜ್ವರ ಪರಿಶೀಲಿಸುವುದು ಸ್ಯಾನಿಟೈಸರ್ ನೀಡಬೇಕು. ಈ ಎಲ್ಲಾ ಖರ್ಚುಗಳ ದೇವಾಲಯದ ಟ್ರಸ್ಟ್ ಗಳೇ ಭರಿಸಬೇಕೆಂದು ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com