ಕೊರೋನಾ-19 ಒತ್ತಡ ದೂರಾಗಿಸಲು ನೃತ್ಯ ಮಾಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು!

ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸೋಂಕಿತರಿಗೆ ಚಿಕಿತ್ಸೆ ನೀಡಿ ಒತ್ತಡಕ್ಕೊಳಗಾಗುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಒತ್ತಡದಿಂದ ದೂರ ಉಳಿಯಲು ಹ್ಯಾಪಿ ಡ್ಯಾನ್ಸ್ ಮೊರೆ ಹೋಗಿದ್ದಾರೆ. 
ವಿಕ್ಟೋರಿಯಾ ಆಸ್ಪತ್ರೆ ವೈದ್ಯರು
ವಿಕ್ಟೋರಿಯಾ ಆಸ್ಪತ್ರೆ ವೈದ್ಯರು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸೋಂಕಿತರಿಗೆ ಚಿಕಿತ್ಸೆ ನೀಡಿ ಒತ್ತಡಕ್ಕೊಳಗಾಗುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಒತ್ತಡದಿಂದ ದೂರ ಉಳಿಯಲು ಹ್ಯಾಪಿ ಡ್ಯಾನ್ಸ್ ಮೊರೆ ಹೋಗಿದ್ದಾರೆ. 

ಒಂದು ವಾರ ಕರ್ತವ್ಯ ನಿಭಾಯಿಸುವ ವೈದ್ಯರು ಮತ್ತೆ 2 ವಾರಗಳ ಕಾಲ ಕ್ವಾರಂಟೈನ್ ನಲ್ಲಿಬೇಕಾಗಿರುವುದರಿಂದ ವೈದ್ಯರು ಆಸ್ಪತ್ರೆಯ ಕ್ಯಾಂಪಸ್ ನಲ್ಲಿಯೇ ಉಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ದೂರ ಉಳಿಯಲು ವೈದ್ಯರು ನೃತ್ಯ ಮಾಡುತ್ತಿದ್ದಾರೆ. 

ದಿನದಲ್ಲಿ ಬಹುತೇಕ ಸಮಯ ವೈದ್ಯರು ಕರ್ತವ್ಯದಲ್ಲಿಯೇ ಇರಲಿದ್ದು, ಈ ವೇಳೆ ಒತ್ತಡವನ್ನು ದೂರಾಗಿಸಲು ವೈದ್ಯರು ನೃತ್ಯವನ್ನು ಆಯ್ದುಕೊಂಡಿದ್ದಾರೆ. ಇದರಿಂದ ಅವರಲ್ಲಿ ಸಂತೋಷವೂ ಕೂಡ ಹೆಚ್ಚಾಗಲಿದೆ ಎಂದು ಮನೋವೈದ್ಯರೊಬ್ಬರು ಹೇಳಿದ್ದಾರೆ. 

ಈ ಹಿಂದೆ ಚೆನ್ನೈ ವೈದ್ಯರು ಮಾಡಿರುವ ಹ್ಯಾಪಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿತ್ತು. ಕೊರೋನಾ ಕರ್ತವ್ಯ ನಿರ್ವಹಿಸುವ ವೈದ್ಯರು, ಕರ್ತವ್ಯ ಮುಗಿದ ಬಳಿಕ ಪ್ರಧಾನಮಂತ್ರಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಲ್ಲಿ ನೀಡಲಾಗಿರುವ ವಸತಿ ಗೃಹದಲ್ಲಿ ವಾಸವಿರಬೇಕಾಗಿದೆ. ಈ ವೇಲೆ ವೈದ್ಯರು ನೃತ್ಯ ಮಾಡಿದ್ದು, ವಿಡಿಯೋ ವೈರಲ್ ಆಗಿತ್ತು. 

ಹ್ಯಾಪಿ ಡ್ಯಾನ್ಸ್ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯರೊಬ್ಬರು, ಪ್ರತೀನಿತ್ಯ 6 ಗಂಟೆಗಳ ಕಾಲ ಕರ್ತವ್ಯನಿರ್ವಹಿಸುತ್ತೇವೆ. ಈ ವೇಳೆ ನಮ್ಮಲ್ಲಿರುವ ಒತ್ತಡವನ್ನು ಡ್ಯಾನ್ಸ್ ಮೂಲಕ ಸುಲಭವಾಗಿ ಹೊರಗೆ ಹಾಕಬಹುದು. ಸುದೀರ್ಘ ಸಮಯದವರೆಗೂ ಪಿಪಿಇ ಕಿಟ್ ಧರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಹೀಗಾಗಿಯೇ ಒತ್ತಡ ಹೊರಹಾಕಲು ನೃತ್ಯವನ್ನು ಆಯ್ದುಕೊಂಡಿದ್ದೇವೆ. ಕರ್ತವ್ಯ ಮುಗಿದ ಕೂಡಲೇ ರೂಮಿಗೆ ತೆರಳಿ 30 ನಿಮಿಷ ನೃತ್ಯ ಮಾಡುತ್ತೇವೆ. ಕೆಲ ವೈದ್ಯರು ಈ ವೇಳೆ ಹಾಡುಗಳನ್ನೂ ಹಾಡುತ್ತಾರೆ. ಇದರಿಂದ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. 

ಮೊಬೈಲ್ ಗಳಲ್ಲಿ ಗೇಮ್ ಗಳನ್ನು ಆಡುತ್ತೇವೆ. ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗಿನ ಸಂಬಂಧ ಇದರಿಂದ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಇದೀಗ ನಾವೆಲ್ಲರೂ ಒಂದು ಕುಟುಂಬದಂತಿದ್ದೇವೆಂದು ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com