ಕೊರೋನಾ ನಿಗ್ರಹಿಸಲು ಹೊರಗಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ವಿಧಿಸುವುದೊಂದೇ ನಮ್ಮ ಬಳಿಯಿರುವ ಆಯ್ಕೆ: ಸಚಿವ ಸುಧಾಕರ್

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊರೋನಾ ನಿಗ್ರಹಿಸಲು ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಈ ನಡುವಲ್ಲೆ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಹೋಂ ಕ್ವಾರಂಟೈನ್ ವಿಧಿಸುವುದೊಂದೇ ನಮ್ಮ ಬಳಿಯಿರುವ ಆಯ್ಕೆಯೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...
ಸಚಿವ ಸುಧಾಕರ್
ಸಚಿವ ಸುಧಾಕರ್

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊರೋನಾ ನಿಗ್ರಹಿಸಲು ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಈ ನಡುವಲ್ಲೆ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಹೋಂ ಕ್ವಾರಂಟೈನ್ ವಿಧಿಸುವುದೊಂದೇ ನಮ್ಮ ಬಳಿಯಿರುವ ಆಯ್ಕೆಯೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶದನಲ್ಲಿ ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಅವರು, ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯ ಉತ್ತಮ ಸ್ಥಾನದಲ್ಲಿದ್ದು, ಪರಿಸ್ಥಿತಿ ನಿಭಾಯಿಸಲು ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ. ಸೋಮವಾರದಿಂದ ಲಾಕ್'ಡೌನ್ 5.0 ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

COVID-19 ವಿರುದ್ಧ ಹೋರಾಡುವಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ?
ರಾಜ್ಯ ಉತ್ತಮ ಸ್ಥಾನದಲ್ಲಿದೆ. ಲಕ್ಷ ಜನಸಂಖ್ಯೆಯಲ್ಲಿ 4,124 ಮಂದಿಗೆ ಪರೀಕ್ಷೆ ನಡೆಸುತ್ತಿದ್ದೇವೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪರೀಕ್ಷಾ ಸಂಖ್ಯೆ ಹೆಚ್ಚಾಗಿಯೇ ಇದೆ. ಕೇರಳ ಹಾಗೂ ಇತರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಸೋಂಕಿತರ ಶೇಕಡವಾರು ರಾಜ್ಯದಲ್ಲಿ 1 ರಷ್ಟಿದೆ. ಕೇರಳದಲ್ಲಿ ಶೇ.2ರಷ್ಟಿದೆ. ಪ್ರತೀನಿತ್ಯ ಸೋಂಕಿತರ ಶೇಕಡವಾರು 5.8ರಷ್ಟಿದ್ದು, ದೇಶದಲ್ಲಿ ಶೇ.10.2ರಷ್ಟಿದೆ. ದೇಶದಲ್ಲಿ ಸಾವಿನ ಶೇಕಡವಾರು 5ರಷ್ಟಿದ್ದರೆ, ರಾಜ್ಯದಲ್ಲಿ 1.72ರಷ್ಟಿದೆ. 

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳನ್ನು 100ಕ್ಕೆ ಏರಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಹಿಂದೆಯೇ ನಾವು ಈ ಸಂಖ್ಯೆಯನ್ನು ತಲುಪಬಹುದಿತ್ತೇ? 
ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಸತತ ಯತ್ನ ನಡೆಸುತ್ತಲೇ ಇದ್ದೇವೆ. ಪ್ರತೀನಿತ್ಯ ನಾವು 15,269 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ 60 ಪ್ರಯೋಗಾಲಯಗಳಲ್ಲಿ 2.75 ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 2 ಪ್ರಯೋಗಾಲಯಗಳನ್ನು ಆರಂಭಿಸಿದ್ದೇವೆ. ಮಾರ್ಚ್ ಅಂತ್ಯದಲ್ಲಿ ಈ ಸಂಖ್ಯೆ 8ಕ್ಕೆ ಏರಿಕೆಯಾಗಿ, ಏಪ್ರಿಲ್ ತಿಂಗಳಿಗೆ 23ಕ್ಕೆ ತಲುಪಿ ಮಾರ್ಚ್ 31ರ ಗಡುವಿನೊಳಗೆ 60 ಪ್ರಯೋಗಾಲಯಗಳ ಗುರಿ ತಲುಪಿದ್ದೇವೆ. 

ಪ್ರತೀಯೊಬ್ಬರೂ ಕೊರೋನಾ ಕುರಿತು ಆತಂಕದಲ್ಲಿದ್ದು, ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಎಲ್ಲರನ್ನೂ ಪರೀಕ್ಷೆಗೊಳಪಡಿಸುವುದು ಯಾವಾಗ?
ಜನರ ಆತಂಕ ಹಾಗೂ ಅವರ ಮನಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರ ಹುಡುಕುವುದು ಹಾಗೂ ಶಂಕಿತರನ್ನು ತಪಾಸಣೆಗೊಳಪಡಿಸುವುದಕ್ಕೆ ನಾನು ಆದ್ಯತೆಯನ್ನು ನೀಡುತ್ತಿದ್ದೇವೆ. ಕಂಟೈನ್ಮೆಂಟ್ ಝೋನ್ ಗಲಲ್ಲೂ ನಾವು ಮಾಸ್ ಟೆಸ್ಟ್ ಗಳನ್ನು ನಡೆಸುತ್ತಿದ್ದೇವೆ. ಸಾಕಷ್ಟು ಕ್ರಮಗಳೊಂದಿಗೆ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದ್ದೇವೆ. 

ಲಾಕ್'ಡೌನ್ 4.0 ಕೊನೆಗೊಂಡ ಬಳಿಕ ಪರಿಸ್ಥಿತಿ ಎದುರಿಸಲು ಯಾವ ರೀತಿಯ ತಯಾರಿ ನಡೆಸುತ್ತಿದ್ದೀರಿ? 
ಸದ್ಯಕ್ಕಂತೂ ಕೊರೋನಾ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಹಾಗಾಗಿ ಸಾಕಷ್ಟು ಸಿದ್ಧತೆಗಳನ್ನೇ ಮಾಡಿಕೊಂಡಿದ್ದೇವೆ. ವಾಸ್ತವಿಕತೆಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಸೋಮವಾರದಿಂದ ಮತ್ತೆ ಲಾಕ್'ಡೌನ್ 5.0 ಆರಂಭಗೊಳ್ಳಲಿದ್ದು, ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೋನಾ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದೇವೆ. 

ರಾಜ್ಯಕ್ಕೆ ವಿದೇಶ ಹಾಗೂ ಹೊರ ರಾಜ್ಯದಿಂದ ಸಾಕಷ್ಟು ಜನರು ಬರುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಯಾವ ರೀತಿ ಸಿದ್ಧತೆ ನಡೆಸಿದ್ದೀರಿ?
ಕಳೆದ 2-3 ವಾರಗಳಿಂಗ ರಾಜ್ಯಕ್ಕೆ 2.5 ಲಕ್ಷ ಜನರು ಆಗಮಿಸಿದ್ದಾರೆ. ಈಗಾಗಲೇ 1.5 ಲಕ್ಷ ಜನರು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ. ನಮಗೆ ಬೇರಾವುದೇ ಆಯ್ಕೆಗಳಿಲ್ಲ. ಹೊರಗಿನಿಂದ ಬರುವವರ ಸಂಖ್ಯೆ ಏರುತ್ತಲೇ ಇದ್ದು, ಅವರೆಲ್ಲರಿಗೂ ಹೋಂ ಕ್ವಾರಂಟೈನ್ ವಿಧಿಸುವುದೊಂದೇ ನಮ್ಮ ಬಳಿಯಿರುವ ಆಯ್ಕೆಯಾಗಿದೆ. ಜನರೂ ಕೂಡ ಹೆಚ್ಚು ಜವಾಬ್ದಾರಿಯುತರಾಗಿರಬೇಕಾಗಿದೆ. 

ಕೊರೋನಾ ನಿಗ್ರಹಿಸಲು ತಂತ್ರಜ್ಞಾನವನ್ನು ಯಾವ ರೀತಿ ಬಳಕೆ ಮಾಡುತ್ತೀರಿ? 
ತಂತ್ರಜ್ಞಾನವನ್ನು ನಾವು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದೇವೆ. ವೈದ್ಯರು, ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಆನ್'ಲೈನ್ ಮೂಲಕ ತರಬೇತಿ ನೀಡುತ್ತಿದ್ದೇವೆ. ಸಂದಿಗ್ಧ ಪರಿಸ್ಧಿತಿಯಲ್ಲಿ 1.6 ಲಕ್ಷ ಕೊರೋನಾ ವಾರಿಯರ್ಸ್'ಗೆ ತರಬೇತಿ ನೀಡಲು ಇದು ಸಹಾಯಕವಾಗಿದೆ. ಟೆಲಿ ವಿಡಿಯೋ ಮೂಲಕ ಐಸಿಯು ರೋಗಿಗಳಿಗೆ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಅವರು ಸೋಂಕಿನಿಂದ ದೂರ ಉಳಿಯಲಿದ್ದಾರೆ. ಇದಲ್ಲದೆ, ಕೊರೋನಾ ವಾರ್ ರೂಮ್ ನಲ್ಲಿಯೂ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಪೊಲೀಸರು, ಆಸ್ಪತ್ರೆಗಳು, ಭದ್ರತಾ ಪಡೆಗಳು. ಆಶಾ ಕಾರ್ಯಕರ್ತೆಯರು, ಬಿಡಬ್ಲ್ಯೂಎಸ್ಎಸ್'ಬಿ ಜೊತೆಗೆ ಆರೋಗ್ಯ ಇಲಾಖೆಯನ್ನು ಸಂಯೋಜನೆಗೊಳಿಸಲು ದಾರಿ ಮಾಡಿಕೊಟ್ಟಿದೆ. ಜಿಯೋಗ್ರಾಫಿಕಲ್ ಇನ್ಫಾರ್ಮೇಷನ್ ವ್ಯವಸ್ಥೆ ಬಳಕೆ ಮೂಲಕ ಸೋಂಕಿತರ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com