ಬಿಬಿಎಂಪಿ ಚುನಾವಣೆಗೆ 'ಆಪ್' ಭರ್ಜರಿ ಸಿದ್ಧತೆ: ದೆಹಲಿ ರೀತಿ ಬೆಂಗಳೂರಿನಲ್ಲೂ ನ.1ಕ್ಕೆ ಕ್ಲಿನಿಕ್'ಗೆ ಚಾಲನೆ!

ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದ್ದು, ರಾಷ್ಟ್ರರಾಜಧಾನಿ ದೆಹಲಿಯ ಮೊಹಲ್ಲಾ ಕ್ಲಿನಿಕ್ ರೀತಿಯಲ್ಲಿಯೇ ಬೆಂಗಳೂರಿನಲ್ಲಿಯೇ ನಂ.1ಕ್ಕೆ ಕ್ಲಿನಿಕ್'ಗಳಿಗೆ ಚಾಲನೆ ನೀಡುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದ್ದು, ರಾಷ್ಟ್ರರಾಜಧಾನಿ ದೆಹಲಿಯ ಮೊಹಲ್ಲಾ ಕ್ಲಿನಿಕ್ ರೀತಿಯಲ್ಲಿಯೇ ಬೆಂಗಳೂರಿನಲ್ಲಿಯೇ ನಂ.1ಕ್ಕೆ ಕ್ಲಿನಿಕ್'ಗಳಿಗೆ ಚಾಲನೆ ನೀಡುತ್ತಿದೆ. 

ಆರಂಭಿಕ ಹಂತವಾಗಿ ಬಂಗಳೂರಿನ ಶಾಂತಿನಗರದಲ್ಲಿರುವ #54 ಬಸಪ್ಪ ರಸ್ತೆಯಲ್ಲಿ ಈ ಕ್ಲಿನಿಕ್ ತೆರೆಯಲಾಗಿದೆ ಎಂದು ತಿಳಿದುಬಂದಿದೆ. ಆಮ್ ಆದ್ಮಿ ಕ್ಲಿನಿಕ್ ಟ್ರಸ್ಟ್ ಈ ಕ್ಲಿನಿಕ್ ಗಳನ್ನು ನೋಡಿಕೊಳ್ಳಲಿದೆ. ಈ ಟ್ರಸ್ಟ್ ಉಚಿತ ವೈದ್ಯಕೀಯ ಪರೀಕ್ಷೆ, ಉಚಿತವಾಗಿ ಔಷಧಿಗಳ ನೀಡುವಿಕೆಯನ್ನು ನೋಡಿಕೊಳ್ಳಲಿದೆ. 

ಮುಂದಿನ ವರ್ಷದ ಆರಂಭದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಇದಕ್ಕಾಗಿ ಆಮ್ ಆದ್ಮಿ ಪಕ್ಷ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಆಪ್ ಕ್ಲಿನಿಕ್ ಗಳನ್ನು ತೆರೆಯುವ ಭರವಸೆಯನ್ನು ನೀಡಲಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್ ಎಎಪಿ ಸರ್ಕಾರದ ಪ್ರಮುಖ ಪ್ರಾಥಮಿಕ ಆರೋಗ್ಯ ಕಾರ್ಯಕ್ರಮವಾಗಿದೆ. 

ನಗರದಲ್ಲಿ ಹಲವಾರು ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಆರೋಗ್ಯ ಶಿಬಿರಗಳಿಗೆ ಬರುವ ಬಡ ಜನರ ಸ್ಥಿತಿಯನ್ನು ನೋಡಿದ್ದೇವೆ ಭಾರತದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಆರೋಗ್ಯ ಸೌಲಭ್ಯಗಳ ಮೇಲೆ  ದೌರ್ಜನ್ಯಗಳು ನಡೆಯುತ್ತಿವೆ, ಮೊಹಲ್ಲಾ ಕ್ಲಿನಿಕ್ ಮಾದರಿಯಿಂದ ಮಾತ್ರ ಇಂತಹ ದೌರ್ಜನ್ಯಗಳನ್ನು ದೂರಾಗಿಸಬಹುದು ಎಂದು ಆಮ್ ಆದ್ಮಿ ಕ್ಲಿನಿಕ್ ಟ್ರಸ್ಟ್ ಸದಸ್ಯೆ ಮತ್ತು ಮಾಜಿ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಅವರು ಹೇಳಿದ್ದಾರೆ. 

ಟ್ರಸ್ಟ್ ನಲ್ಲಿಔವರು ಸದಸ್ಯರಿದ್ದು, ಆರಂಭಿಕ ಹಂತದಲ್ಲಿ ಒಂದು ಕ್ಲಿನಿಕ್'ಗೆ ಚಾಲನೆ ನೀಡುವ ಮೂಲಕ ಸರ್ಕಾರ ಹಾಗೂ ಜನರಿಗೆ ಮಾದರಿಗಳನ್ನು ತೋರಿಸಲು ನಿರ್ಧರಿಸಲಾಗಿದೆ. ಈ ಕ್ಲಿನಿಕ್ ಗಳು ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಇದು ನಮ್ಮ ಪ್ರಣಾಳಿಕೆಯ ಭಾಗವಾಗಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com